70 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೆಪಿಸಿ ನೌಕರನ ಶವ ಮಾಣಿ ಡ್ಯಾಂನಲ್ಲಿ ಪತ್ತೆ | ನಡೆದಿದ್ದೇನು?

  body of a KPC employee, backwater of Mani Dam,  a resident of Yadur, Hosanagar taluk, Shimoga district

70 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೆಪಿಸಿ ನೌಕರನ ಶವ ಮಾಣಿ ಡ್ಯಾಂನಲ್ಲಿ ಪತ್ತೆ | ನಡೆದಿದ್ದೇನು?
  body of a KPC employee, backwater of Mani Dam,  a resident of Yadur, Hosanagar taluk, Shimoga district

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 22, 2025 ‌‌ 

ಕಳೆದ ವರ್ಷ ನವೆಂಬರ್‌ 3 ರಂದು ನಾಪತ್ತೆಯಾಗಿದ್ದ ಕೆಪಿಸಿ ನೌಕರನ ಮೃತದೇಹ ನಿನ್ನೆ ದಿನ ಮಾಣಿ ಡ್ಯಾಂ ಬ್ಯಾಕ್‌ ವಾಟರ್‌ನಲ್ಲಿ ಪತ್ತೆಯಾಗಿದೆ.  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಯಡೂರು ನಿವಾಸಿ ಭರತ್‌ ಮೃತ ವ್ಯಕ್ತಿ. ಇವರು ಕೆಪಿಸಿ ಯಲ್ಲಿ ಗುತ್ತಿಗೆ ನೌಕರರಾಗಿದ್ದರು. ನವೆಂಬರ್‌ 3 ರಂದು ನಾಪತ್ತೆಯಾಗಿದ್ದರು. ತತ್ಸಂಬಂಧ ಭರತ್‌ರವರ ಪತ್ನಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಅಲ್ಲದೆ ಮಂಗಳೂರಿನ ಈಶ್ವರ್‌ ಮಲ್ಪೆ ಸಹ ಮಾಣಿ ಹಿನ್ನೀರಿನಲ್ಲಿ ಹುಡುಕಾಟ ನಡೆಸಿದ್ದರು. ಐದು ದಿನಗಳ ಕಾಲ ಕಾರ್ಯಾಚರಣೆ ನಡೆದಿತ್ತು. ಆ ಬಳಿಕ ಸ್ಥಗಿತಗೊಂಡಿತ್ತು. 

ಇದೀಗ ನಿನ್ನೆ ದಿನ ಮಂಗಳವಾರ ಹುಮ್ಮಡಗಲ್ಲು ಬಳಿ ಮೃತದೇಹವೊಂದು ಪತ್ತೆಯಾಗಿದೆ. ಅದರ ಗುರುತು ಪತ್ತೆಗಾಗಿ ಭರತ್‌ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಕುಟುಂಬಸ್ಥರು ಬಟ್ಟೆ ನೋಡಿ ಇದು ಭರತ್‌ ರವರ ಮೃತದೇಹ ಎಂದು ಗುರುತಿಸಿದ್ದಾರೆ. 

SUMMARY |  body of a KPC employee who went missing on November 3 last year was found in the backwater of Mani Dam yesterday. The deceased has been identified as Bharath, a resident of Yadur, Hosanagar taluk, Shimoga district.

KEY WORDS |   body of a KPC employee, backwater of Mani Dam,  a resident of Yadur, Hosanagar taluk, Shimoga district.