SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿ ಕೋಡಿಬಿದ್ದಿದ್ದು, ಭದ್ರಾ ಜಲಾಶಯದಿಂದ ಮೇಲ್ದಂಡೆ ಯೋಜನೆಯ ನಾಲೆಗೆ ಹರಿಸುತ್ತಿರುವ ನೀರನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ಲಿಂಗರಾಜ ಒತ್ತಾಯಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ ಮೊದಲ ವಾರದಿಂದ ನಿತ್ಯ 700 ಕ್ಯುಸೆಕ್ ನೀರನ್ನು ಮೇಲ್ದಂಡೆ ನಾಲೆಗೆ ಹರಿಸಲಾಗುತ್ತಿದೆ. ಈವರೆಗೆ 4 ಟಿಎಂಸಿ ಅಡಿಗೂ ಹೆಚ್ಚು ನೀರು ನಾಲೆಯ ಮೂಲಕ ವಿ.ವಿ.ಸಾಗರವನ್ನು ತಲುಪಿದೆ. ಅಲ್ಲದೆ ಜಲಾಶಯದ ಭರ್ತಿಯಾಗಿ ಕೋಡಿ ಬಿದ್ದಿದೆ. ಆದಾಗ್ಯು ಡ್ಯಾಂನಿಂದ ನಾಲೆಗೆ ಹರಿಸುತ್ತಿರುವ ನೀರನ್ನ ನಿಲ್ಲಿಸುತ್ತಿಲ್ಲ ಎಂದು ಎಚ್.ಆರ್.ಲಿಂಗರಾಜ್ ಆರೋಪಿಸಿದ್ದಾರೆ.
ಇದೇ ವೇಳೆ, ಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಬಿಡುಗಡೆ ಮಾಡಲಾಗಿದೆ. ಆದರೆ ವಾರ ಕಳೆದರೂ ಜಿಲ್ಲೆಯ ನಾಲೆಗಳಲ್ಲಿ ನೀರು ಕಾಣುತ್ತಿಲ್ಲ ಎಂದು ದೂರಿರುವ ಲಿಂಗರಾಜ್ ನಾಲೆಯ ಕೊನೆಯ ಭಾಗದವರೆಗೂ ನೀರು ತಲುಪುತ್ತಿಲ್ಲ ಎಂದಿದ್ದಾರೆ.
ಹಸಿರಾದ ತುಂಗಭದ್ರಾ ನೀರುʼ
ಇನ್ನೊಂದೆಡೆ ಮುಂಡರಗಿ ತಾಲ್ಲೂಕಿನ ಶೀರನಹಳ್ಳಿ, ಗಂಗಾಪೂರ ಹಾಗೂ ಕೊರ್ಲಹಳ್ಳಿ ಗ್ರಾಮಗಳ ಮುಂದೆ ಹರಿಯುತ್ತಿರುವ ತುಂಗಭದ್ರಾ ನದಿ ನೀರು ಎರಡು-ಮೂರು ದಿನಗಳಿಂದ ಗಾಢವಾದ ಹಸಿರು ಬಣ್ಣಕ್ಕೆ ತಿರುಗಿದ್ದು, ನದಿ ದಂಡೆಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರತಿವರ್ಷ ಮಾರ್ಚ್ ಹೊತ್ತಿಗೆ ಹಸಿರ ಗಟ್ಟುತ್ತಿದ್ದ ನೀರು ಈ ಸಲ ಜನವರಿಯಲ್ಲಿ ಹಸಿರುಗಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
SUMMARY | Vanivilasa Sagar reservoir in Hiriyur taluk is full and overflowing, and there is a demand that the water being released from the Bhadra reservoir to the canal of the upper river project should be stopped immediately.
KEY WORDS |Vanivilasa Sagar reservoir in Hiriyur taluk is full, water released from Bhadra dam to the cana , upper river project