ಭದ್ರಾ ಡ್ಯಾಂನಿಂದ ನೀರು ಹರಿಸುವಂತೆ ಪ್ರತಿಭಟನೆ | ಏನಿದು ವಿಷಯ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Dec 31, 2024 ‌‌ 

ಶಿವಮೊಗ್ಗ ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಶಿವಮೊಗ್ಗ ನಗರದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಚೇರಿ ಎದುರು ನಿನ್ನೆ ದಿನ ರೈತರು ಪ್ರತಿಭಟನೆ ನಡೆಸಿದ್ದಾರೆ. 

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ  ಸದಸ್ಯರು ಪ್ರತಿಭಟನೆ ನಡೆಸಿ ಭದ್ರಾ ಎಡದಂಡೆ ಕಾಲುವೆಗೆ ನವೆಂಬರ್‌ 25ರಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಪ್ರಸಕ್ತ ಬೇಸಿಗೆ ಕಾಲದ ಭತ್ತ ಬೆಳೆಯಲು ನೀರಿನ ಅನಿವಾರ್ಯತೆ ಇದೆ. ತೋಟದ ಬೆಳೆಗಳು, ಕಬ್ಬು ಸೇರಿದಂತೆ ಇತರೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಈ ನಿಟ್ಟಿನಲ್ಲಿ ಭದ್ರಾ ಎಡದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿದರು

ತಕ್ಷಣವೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ನೀರು ಹರಿಸುವ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರಾಧಿಕಾರದ ಅನಿರ್ದಿಷ್ಟಾವಧಿ ಕಚೇರಿ ಎದುರು ಧರಣಿ ನಿರ್ಧಾರ ನಡೆಸಲಾಗುವುದು ಎಂದು ಇದೇ ವೇಳೆ ಆಗ್ರಹಿಸಿದರು.

SUMMARY |  Farmers protest in front of Bhadra Achukattu Authority office demanding release of water from Bhadra reservoir to left bank canal

KEY WORDS |  Farmers protest , Bhadra Achukattu Authority office , release of water from Bhadra reservoir, left bank canal

Share This Article