ಭದ್ರಾವತಿಯಲ್ಲಿ ಕೆಲಸ ಮುಗಿಸಿ, ಬೈಕ್​​​​​​​​​​​​ನಲ್ಲಿ ಮನೆಗೆ ಹೋಗುತ್ತಿದ್ದವನಿಗೆ ಆಘಾತ | 23 ರ ಯುವಕ ಸಾವು

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 12, 2025 ‌‌ ‌‌

ಕೆಲಸ ಮುಗಿಸಿ ಮನೆಗೆ ಹೋಗುವಾಗ ರಸ್ತೆಯಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಏಕೆಂದರೆ ತಮ್ಮದಲ್ಲದ ತಪ್ಪಿಗೆ ಜೀವವೇ ಕಳೆದುಹೋಗುವ ಅಪಾಯ ಈಗೀಗ ಹೆಚ್ಚು ಕಾಣುತ್ತಿದೆ. ಹೊಳೆಹೊನ್ನೂರಲ್ಲಿಯು ಯುವಕನೊಬ್ಬ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿ ಸಾವನ್ನಪ್ಪಿದ್ದಾನೆ. 

ಇಲ್ಲಿನ ಭದ್ರಾವತಿ ರಸ್ತೆಯ ಸಂತೋಷ್ ಮಿಲ್ ಸಮೀಪ ಲಾರಿ ಹಾಗೂ ಬೈಕ್ ಮಧ್ಯೆ  ಆಕ್ಸಿಡೆಂಟ್ ಆಗಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾರೆ.  ಮಾರಶೆಟ್ಟಿಹಳ್ಳಿಯ ವಿನುತ್ ಘೋರ್ಪಡೆ (23) ಮೃತ ಯುವಕ. 

ಭದ್ರಾವತಿಯ ಮೀನಾ ನರ್ಸಿಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇವರು ಗುರುವಾರ ರಾತ್ರಿ ಕೆಲಸ ಮುಗಿಸಿ ಮಾರಶೆಟ್ಟಿಹಳ್ಳಿಗೆ ಬರುತ್ತಿದ್ದರು. ಈ ವೇಳೆ ಅಪಘಾತವಾಗಿತ್ತು. ಆನಂತರ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಟ್ರೀಟ್ಮೆಂಟ್​ ನೀಡಲಾಗುತ್ತಿತ್ತು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Share This Article