SHIVAMOGGA | MALENADUTODAY NEWS | ಮಲೆನಾಡು ಟುಡೆ Jan 5, 2025
ಕೆಲದಿನಗಳಿಂದ ದಾವಣೆಗೆರೆ ರೈತರು ಸೇರಿದಂತೆ ವಿವಿಧ ಕಡೆಯ ರೈತರು ಭದ್ರಾ ಡ್ಯಾಂನಿಂದ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಪೂರಕವಾಗಿ ಇದೀಗ ಭದ್ರಾ ನಾಲೆಗಳಿಂದ ನೀರು ಬಿಡಲು ಸರ್ಕಾರ ತೀರ್ಮಾನಿಸಿದೆ.
ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಶನಿವಾರ ಅಂದರೆ ನಿನ್ನೆಯಿಂದಲೇ ನೀರು ಹರಿಸಲು ತೀರ್ಮಾನಿಸಿ ಹರಿಸಲಾಗುತ್ತಿದೆ.
ಬಲದಂಡೆ ನಾಲೆಗೆ ಜನವರಿ 8 ರಿಂದ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷ ಡಾ.ಅಂಶುಮಂತ್ ತಿಳಿಸಿದ್ದಾರೆ.
ಈ ಸಂಬಂಧ ಕಾಡಾ ಕಚೇರಿಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ ಮಧು ಬಂಗಾರಪ್ಪ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆದಿದೆ. ಆ ಬಳಿಕ ನೀರು ಹರಿಸುವ ತೀರ್ಮಾನ ಹೊರಬಿದ್ದಿದೆ.
ಭದ್ರಾ ಜಲಾಶಯದಲ್ಲಿ ಶನಿವಾರ 66.964 ಟಿಎಂಸಿ ಅಡಿ ನೀರಿನ ಸಂಗ್ರಹ ಇದ್ದು, ಎರಡೂ ನಾಲೆಗಳಿಗೆ ಮುಂದಿನ 120 ದಿನಗಳವರೆಗೆ ನಿರಂತರವಾಗಿ ನೀರು ಹರಿಸಲಾಗುತ್ತದೆ
ಭದ್ರಾ ಎಡದಂಡೆ ಕಾಲುವೆಯಿಂದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ರೈತರಿಗೆ ಅನುಕೂಲವಾಗಲಿದ್ದು ನಿತ್ಯ 380 ಕ್ಯುಸೆಕ್ ನೀರು ಹರಿಯಲಿದೆ.
ಇನ್ನೂ ಬಲದಂಡೆ ಕಾಲುವೆಯಿಂದ ಶಿವಮೊಗ್ಗ, ದಾವಣಗೆರೆ, ವಿಜಯನಗರ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದ್ದು ನಿತ್ಯ 2,650 ಕ್ಯುಸೆಕ್‌ನಂತೆ ನಾಲ್ಕು ತಿಂಗಳಲ್ಲಿ 32 ಟಿಎಂಸಿ ಅಡಿ ನೀರು ಹರಿಯಲಿದೆ.
SUMMARY | Kada decides to release water to Bhadra left bank and Bhadra right bank canals
KEY WORDS | Kada , Bhadra left bank , Bhadra right bank canals