ದಿನ ಭವಿಷ್ಯ / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣದ ಶಿಶಿರ ಋತು, ಮಾಘ ಮಾಸ ಈ ದಿನದ ಗ್ರಹಗತಿಗಳ ಪ್ರಕಾರ ಇಂದು ಬಹುಳ ಚತುರ್ದಶಿ ತಿಥಿಯು ಸಂಜೆ 5.31 ರವರೆಗೆ ಇರಲಿದ್ದು, ಅದಾದ ನಂತರ ಅಮಾವಾಸ್ಯೆ ಆರಂಭವಾಗಲಿದೆ. ಶ್ರವಣ ನಕ್ಷತ್ರ ರಾತ್ರಿ 9.04 ರವರೆಗೆ ಇರುತ್ತದೆ ಮತ್ತು ನಂತರ ಧನಿಷ್ಠ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆ ಬೆಳಿಗ್ಗೆ 10.01 ರಿಂದ 11.41 ರವರೆಗೆ ಲಭ್ಯವಿವೆ.ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇರುತ್ತದೆ.
ಇಂದಿನ ದಿನಭವಿಷ್ಯ
ಮೇಷ / ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ, ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲಕರವಾದ ವಾತಾವರಣ. ಆಸ್ತಿ ಪಾಸ್ತಿಗಳಿಗೆ ಸಂಬಂಧಿಸಿದ ವಿವಾದ ಬಗೆಹರಿಯಲಿವೆ ಮತ್ತು ದೂರದ ಊರಿನಿಂದ ನೆಂಟರ ಆಗಮನ. ದೇವಾಲಯಗಳಿಗೆ ಭೇಟಿ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಆಶಾದಾಯಕ ಬೆಳವಣಿಗೆ ಕಂಡುಬರುತ್ತದೆ.
ವೃಷಭ / ವ್ಯವಹಾರಗಳಲ್ಲಿ ಸ್ವಲ್ಪ ಗೊಂದಲ, ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು ಕಷ್ಟವಾಗಬಹುದು. ಅನಿರೀಕ್ಷಿತ ಪ್ರಯಾಣ ಮತ್ತು ಅನಾರೋಗ್ಯ. ಸಹೋದರರೊಂದಿಗೆ ಮನಸ್ತಾಪ ಹಾಗೂ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅಸ್ಥಿರತೆ.

ಮಿಥುನ / ಕಠಿಣ ಪರಿಶ್ರಮವಿದ್ದರೂ ಫಲಿತಾಂಶ ಮರೀಚಿಕೆ. ಆಸ್ತಿ ವಿಚಾರದಲ್ಲಿ ತಕರಾರು ಆರೋಗ್ಯದಲ್ಲಿ ವ್ಯತ್ಯ. ದೂರ ಪ್ರಯಾಣಗಳು ಹಾಗೂ ಬಂಧುಗಳೊಂದಿಗೆ ಜಗಳ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅಡೆತಡೆ
ಕರ್ಕಾಟಕ / ಗೌರವ ಮತ್ತು ಪ್ರಭಾವ ಹೆಚ್ಚಾಗಲಿದ್ದು, ವಸ್ತು ಲಾಭವಾಗಲಿದೆ. ಆಸ್ತಿಗೆ ಸಂಬಂಧಿಸಿದ ಹಳೆಯ ವಿವಾದ ಸುಖಾಂತ್ಯ ಕಾಣಲಿವೆ ಮತ್ತು ಶುಭ ಸುದ್ದಿ ಕಿವಿಗೆ ಬೀಳಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಧನಾತ್ಮಕ ವಾತಾವರಣವಿರಲಿದೆ.
ಸಿಂಹ / ಸ್ನೇಹಿತರೊಂದಿಗೆ ಸಂತೋಷದ ಸಮಯವನ್ನು ಕಳೆಯುವರು, ಹಳೆಯ ಬಾಕಿ ವಸೂಲಿ, ಅನಿರೀಕ್ಷಿತ ಘಟನೆಯೊಂದು ನಡೆಯಲಿದೆ. ಅಚ್ಚರಿ ಆಗಲಿದೆ, ಉದ್ಯೋಗ ಮತ್ತು ವ್ಯಾಪಾರ ಉತ್ಸಾಹದಿಂದ ಸಾಗಲಿವೆ.

ಕನ್ಯಾ / ಆರ್ಥಿಕ ವ್ಯವಹಾರದಲ್ಲಿ ಕಿರಿಕಿರಿ. ಕೆಲಸ ಕಾರ್ಯಗಳಲ್ಲಿ ವಿಪರೀತ ಶ್ರಮ ಮತ್ತು ವಿಳಂಬ. ಆರೋಗ್ಯ ಸಮಸ್ಯೆ ಹಾಗೂ ಕುಟುಂಬದಲ್ಲಿ ಭಿನ್ನಾಭಿಪ್ರಾಯ. ವ್ಯಾಪಾರ ಮತ್ತು ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಗೊಂದಲದ ದಿನ
ದಿನ ಭವಿಷ್ಯ
ತುಲಾ / ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಅವಕಾಶ, ಭೂಮಿಗೆ ಸಂಬಂಧಿಸಿದ ವ್ಯಾಜ್ಯ ಎದುರಾಗಬಹುದು. ತೆಗೆದುಕೊಂಡ ನಿರ್ಧಾರಗಳಲ್ಲಿ ಬದಲಾವಣೆ, ಆರೋಗ್ಯದಲ್ಲಿ ಏರುಪೇರಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಒತ್ತಡ ಹೆಚ್ಚಾಗಲಿದ್ದು, ದೂರದ ಊರುಗಳಿಗೆ ಪ್ರಯಾಣ.
ವೃಶ್ಚಿಕ / ದೂರದ ಸಂಬಂಧಿಗಳ ಭೇಟಿ , ಔತಣಕೂಟಗಳಲ್ಲಿ ಭಾಗವಹಿಸುವ ಯೋಗವಿದೆ. ಅಂದುಕೊಂಡ ಕೆಲಸ ನೆರವೇರಲಿದ್ದು, ಹೊಸ ವಿಷಯ ಕಲಿಯುವ ಆಸಕ್ತಿ ಮೂಡಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಪ್ರೋತ್ಸಾಹ ಸಿಗಲಿದೆ
ಧನುಸ್ಸು / ವ್ಯವಹಾರಗಳಲ್ಲಿ ಒತ್ತಡ. ಬಂಧುಗಳೊಂದಿಗೆ ಮನಸ್ತಾಪ. ಆರೋಗ್ಯ ಸಮಸ್ಯೆ ಮತ್ತು ಹೆಚ್ಚಿನ ಶ್ರಮದ ದಿನ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹ ಕಡಿಮೆ
ಮಕರ / ವಾಹನ ಖರೀದಿಸುವ ಯೋಗ . ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಶುಭ ಸಮಾರಂಭಗಳಿಗೆ ಆಹ್ವಾನ. ವ್ಯಾಪಾರ ವಿಸ್ತರಣೆ, ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ದೊರೆಯಲಿದೆ

Shivamogga airport ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಮತ್ತೊಂದು ಗುಡ್ ನ್ಯೂಸ್! ಏನದು ಗೊತ್ತಾ?
ಕುಂಭ / ಕೆಲಸ ಕಾರ್ಯಗಳಲ್ಲಿ ಅಡೆತಡೆ. ಪೂರ್ವಯೋಜಿತ ಪ್ರಯಾಣ, ಬಂಧು ಮಿತ್ರರೊಂದಿಗೆ ಭಿನ್ನಾಭಿಪ್ರಾಯ. ದೇವಾಲಯಗಳಿಗೆ ಭೇಟಿ ನೀಡುವಿರಿ.ಉದ್ಯೋಗ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿದ್ದು, ನಿರುದ್ಯೋಗಿಗಳಿಗೆ ಮಾನಸಿಕ ಒತ್ತಡವಿರಲಿದೆ.
ಮೀನ / ಹೊಸ ಪರಿಚಯ, ಆಪ್ತರಿಂದ ಸಂತೋಷದ ಸುದ್ದಿ ಬರಲಿವೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದು, ಹಳೆಯ ವಿವಾದ ಬಗೆಹರಿಯಲಿವೆ. ವಾಹನ ಯೋಗವಿದ್ದು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಹುರುಪು ಮೂಡಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.





