SHIVAMOGGA NEWS TODAY

ಕುಟುಂಬ ಸಮೇತರಾಗಿ ಶಾದಿ ಮಹಾಲ್​ಗೆ ಹೋದ್ರು, ಮನೆಗೆ​​ ಬಂದು ನೋಡ್ದಾಗ ಏನಾಗಿತ್ತು ಗೊತ್ತಾ..

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Burglary in Shivamogga ಶಿವಮೊಗ್ಗ :  ಸಂಬಂಧಿಕರ ಮದುವೆಗೆಂದು ತೆರಳಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ಒಟ್ಟು 4 ಲಕ್ಷ  ರೂಪಾಯಿ ಮೌಲ್ಯದ ಬಂಗಾರವ ಹಾಗೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಈದ್ಗಾನಗರದ ಸೂಳೆಬೈಲಿನಲ್ಲಿ ನಡೆದಿದೆ.\

ಗಗನಕ್ಕೇರಿದ ಅಡಿಕೆ ಶಿವಮೊಗ್ಗ, ಹೊಸನಗರ, ಶಿರಸಿ, ಸಾಗರದಲ್ಲಿ ಒಳ್ಳೆಯ ರೇಟು! ದಾವಣಗೆರೆಯಲ್ಲಿ ದಾಖಲೆಯ ಓಟ 

ನಗರದ ಈದ್ಗಾನಗರದ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿಯೇ ಸಣ್ಣ ಚಿಲ್ಲರೆ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಫೆಬ್ರವರಿ 12ರಂದು ಬೆಳಿಗ್ಗೆ ತಮ್ಮ ಕುಟುಂಬದೊಂದಿಗೆ ಸವಾಯಿಪಾಳ್ಯದಲ್ಲಿರುವ ಶಾದಾಬ್ ಶಾದಿ ಮಹಲ್‌ನಲ್ಲಿ ಆಯೋಜಿತವಾಗಿದ್ದ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. 

ಕಾರ್ಯಕ್ರಮ ಮುಗಿಸಿ ಕುಟುಂಬಸ್ಥರು ಮನೆಗೆ ವಾಪಸ್ಸಾದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಹಿತ್ತಲ ಬಾಗಿಲು ತೆರೆದಿದ್ದು, ಬೆಡ್‌ರೂಂ ಹಾಗೂ ಚಿಲ್ಲರೆ ಅಂಗಡಿಯ ಮೇಲ್ಭಾಗದ ಹಂಚುಗಳನ್ನು ಕಿತ್ತಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಮನೆಯವರು ಬೀರು ಪರಿಶೀಲಿಸಿದಾಗ ಬಂಗಾರ ಕಳುವಾಗಿರುವುದು ತಿಳಿದುಬಂದಿದೆ. 

ಬೀರುವಿನಲ್ಲಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಚಿನ್ನದ ಓಲೆ, 1.50 ಲಕ್ಷ ರೂ. ಮೌಲ್ಯದ 15 ಗ್ರಾಂ ತೂಕದ ತಾಳಿ ಸರ ಹಾಗೂ 1 ಲಕ್ಷ ರೂ. ಮೌಲ್ಯದ 10 ಗ್ರಾಂ ಚಿನ್ನದ ಸರ ಸೇರಿದಂತೆ ಒಟ್ಟು 35 ಗ್ರಾಂ ಚಿನ್ನಾಭರಣಗಳು ಕಳುವಾಗಿದೆ. ಇದರೊಂದಿಗೆ ಮನೆಯಲ್ಲಿದ್ದ 55,000 ರೂ. ನಗದು ಹಾಗೂ ಅಂಗಡಿಯ ಡ್ರಾಯರ್‌ನಲ್ಲಿದ್ದ 2000 ರೂ. ಹಣವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಘಟನೆ ಹಿನ್ನೆಲೆ ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,

Burglary in Shivamogga Eidgah Nagar

Shimoga Chain Snatching SHIMOGA CHAIN SNATCHING  crime news Shivamogga Chain Snatching Shoes and Slippers theft Shivamogga crime news Shivamogga news today
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.