SHIVAMOGGA| MALENADUTODAY NEWS | ಮಲೆನಾಡು ಟುಡೆ Apr 9, 2025
ಸುದ್ದಿ 1 : ಗೃಹಿಣಿ ಆತ್ಮಹತ್ಯೆ | ಪತಿಗೆ ಇನ್ನೊಬ್ಬಳ ಜೊತೆ ಸಲಿಗೆ ಇದು ಎಂದು ನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜದಾನಿ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಹೆಬ್ಬಾಳದ ಕನಕ ನಗರದಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹರ್ ಆಸ್ಮಾ (30) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತಿ ಬಷೀರ್ ಉಲ್ಲಾ ಎಂಬಾತನನ್ನು ಬಂಧಿಸಲಾಗಿದೆ. ಆಸ್ಮಾ ಎಂ.ಎ ಪದವಿ ಪಡೆದಿದ್ದರು. ಅವರ ಸಾವು ಕುಟುಂಬಸ್ಥರಿಗೆ ದುಃಖ ತಂದಿದ್ದು, ಅಳಿಯನ ವಿರುದ್ಧ ಫೋಷಕರು ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿ 2 : 14 ಕೋಟಿ ನಕಲಿ ನೋಟು | ಉತ್ತರ ಕನ್ನಡ ಜಿಲ್ಲೆಯಲ್ಲಿನ ಮನೆ ಒಂದರಲ್ಲಿ 500 ರೂಪಾಯಿ ಮುಖಬೆಲೆಯ ಬರೋಬ್ಬರಿ 14 ಕೋಟಿ ನಕಲಿ ನೋಟು ಪತ್ತೆಯಾಗಿದೆ. ಪ್ರಕರಣ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಲ್ಲಿನ ದಾಂಡೇಲಿಯ ಗಾಂಧಿ ನಗರದ ಅರ್ಷದ್ ಖಾನ್ ಎಂಬುವರ ಮನೆಯಲ್ಲಿ 500 ರೂ ಮೌಲ್ಯದ 14 ಕೋಟಿ ನಕಲಿ ನೋಟುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿ ಪೊಲೀಸರು ಇನ್ನಷ್ಟೆ ಪೂರ್ಣ ಮಾಹಿತಿ ನೀಡಬೇಕಿದೆ.
ಸುದ್ದಿ 3 : ಮಗನ ಜೊತೆ ಅಮ್ಮನು ಪಾಸ್ | ನಿನ್ನೆ ಹೊರಬಿದ್ದ ಸೆಕೆಂಡ್ ಪಿಯುಸಿ ಪಲಿತಾಂಶದಲ್ಲಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿ 20 ವರ್ಷಗಳ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ತಾಯಿ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಮಗ ಇಬ್ಬರೂ ಉತ್ತೀರ್ಣರಾಗಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ದಬ್ಬಗುಂಟೆ ಅಂಗನವಾಡಿ ಸಹಾಯಕಿ ಕರಿಯಮ್ಮ ಪಿ.ಜಿ. ಮತ್ತು ಯಶವಂತ ಎಚ್. ಒಟ್ಟಿಗೆ ಪಿಯುಸಿ ತೇರ್ಗಡೆ ಹೊಂದಿರುವ ತಾಯಿ-ಮಗ.