ಬಾವಿಗೆ ಬಿದ್ದ ಬಾಲಕ, ಮನೆ ಕಟ್ತಿದ್ದ ಮಾಲೀಕನಿಗೆ ಶಾಕ್‌, ರೈತರೇ ಟ್ರ್ಯಾಕ್ಟರ್‌ ವಿಚಾರಕ್ಕೆ ಏನಾಯ್ತು ಗೊತ್ತಾ | ಶಿವಮೊಗ್ಗ ಸುದ್ದಿಗಳು

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024 ‌‌ 

ಶಿವಮೊಗ್ಗದಲ್ಲಿ ನಿನ್ನೆದಿನ ನಡೆದ ಘಟನೆಗಳ ವಿವರ ಹಾಗೂ ಮಾಹಿತಿಯನ್ನು ಗಮನಿಸುವುದಾದರೆ, ನಿನ್ನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಬಾವಿಯೊಳಗೆ ಈಜಲು ನೀರಿಗೆ ಇಳಿದಿದ್ದ ಬಾಲಕನೊಬ್ಬ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ.ಅಪ್ನಾನ್‌ ಎಂಬ ಹೆಸರಿನ ಬಾಲಕ ಇತರರ ಜೊತೆಗೆ ನೀರಲ್ಲಿ ಈಜಲು ತೆರಳಿದ್ದ. ಆದರೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸ್ತಿದ್ದಾರೆ.

ಅತ್ತ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆಯಲ್ಲಿ ಟ್ರ್ಯಾಕ್ಟರ್‌ ಮಾಲೀಕನೊಬ್ಬ ತನ್ನ ಟ್ರ್ಯಾಕ್ಟರ್‌ ಗೆ ಬೆಂಕಿ ಹಚ್ಚಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ. ಟ್ರ್ಯಾಕ್ಟರ್ ಷೋ ರೂಂ ನಲ್ಲಿ ಸರ್ವಿಸ್ ಸರಿ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ಆತ ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.  ಕಾರಗಡಿ ಸಮೀಪದ ಮಂಡ್ರೊಳ್ಳಿಯ ಲಕ್ಷ್ಮಿನಾರಾಯಣ ಎಂಬವರ ಟ್ರ್ಯಾಕ್ಟರ್ ಗೆ ಐದು ವರ್ಷ ಗ್ಯಾರಂಟಿ ಇದೆ. ಆದಾಗ್ಯು ಸ್ಪೇರ್‌ ಪಾರ್ಟ್‌ಗೆ ಸರ್ವಿಸ್‌ನವರು ಹಣ ಕೇಳುತ್ತಿದ್ದಾರೆ ಎಂಬುದು ಆರೋಪ. ಈ ಕಾರಣಕ್ಕೆ ಶೋರೂಮ್‌  ಎದುರು ಧರಣಿ ನಡೆಸಿದ ರೈತ, ಅಲ್ಲಿಯೇ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. 

ಇನ್ನೊಂದೆಡೆ ಶಿರಾಳಕೊಪ್ಪದ ಹರಗಿ ಗ್ರಾಮದಲ್ಲಿ ವಿದ್ಯುತ್‌ ಶಾಕ್‌ನಿಂದ ಲೋಕಪ್ಪ ಎಂಬವರು ಸಾವನ್ನಪ್ಪಿದ್ದಾರೆ. ಮನೆ ಕಟ್ಟುತ್ತಿದ್ದ ಇವರು ಇತ್ತೀಚೆಗೆ ಸ್ಲ್ಯಾಬ್‌ ಕೆಲಸ ಮುಗಿಸಿದ್ದರು. ಅದರ ಕ್ಯೂರಿಂಗ್‌ಗಾಗಿ ನೀರು ಸಲ್ಲಿಸಲಾಗಿತ್ತು. ಈ ವೇಳೆ ಮೋಟಾರ್‌ ವಯರ್‌ ನೀರಿಗೆ ತಾಕಿ ಮೆಟ್ಟಿಲು ಇಳಿಯುತ್ತಿದ್ದ ವೇಳೆ ಅದು ಲೋಕಪ್ಪರಿಗೆ ತಾಕಿದೆ. ಈ ವೇಳೆ ಕರೆಂಟ್‌ ತಗುಲಿ ಅವರು ಸಾವನ್ನಪ್ಪಿದ್ದಾರೆ. 

SUMMARY | shivamogga short news 

KEY WORDS |   shivamogga short news 

Share This Article