ಬಾಳಗಾರು ಮಠದ ಜಾಗ ಅತಿಕ್ರಮ ಪ್ರವೇಶ, ಒತ್ತುವರಿ, ಬೆದಿರಿಕೆ | ಮಾಳೂರು ಪೊಲೀಸ್‌ ಠಾಣೆಯಲ್ಲಿ FIR

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 12, 2025 ‌‌ ‌

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುಡುಮುಲ್ಲಿಗೆಯ ಬಾಳುಗಾರುವಿನಲ್ಲಿರುವ ಶ್ರೀಮದಾರ್ಯ ಅಕ್ಷೋಭ್ಯ ತೀರ್ಥ ಮೂಲ ಸಂಸ್ಥಾನ ಮಠಕ್ಕೆ ಸೇರಿದ ಬಾಳಗಾರು ಮಠದ ಜಾಗವನ್ನು ಬೇರೆಯವರು ಅತಿಕ್ರಮ ಪ್ರವೇಶ ಮಾಡಿ ಒತ್ತುವರಿ ಮಾಡಿಕೊಂಡು ಬೆದರಿಕೆ ಹಾಕಿರುವ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

ಮಾಳೂರು ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಮಠದ ಜಿಪಿಎ ಹೋಲ್ಡರ್‌ ನೀಡಿರುವ ದೂರಿನ ಸಂಬಂದ ಎಫ್‌ಐಆರ್‌ ದಾಖಲಾಗಿದ್ದು, ಅದರ ಪ್ರಕಾರವಾಗಿ, ಮಠದ ಮುಂಭಾಗದಲ್ಲಿರುವ ಖಾಲಿ ಜಾಗವನ್ನು, ಆರೋಪಿಗಳು ಮಟ್ಟ ಮಾಡಿಸಿ ಬೇಲಿ ಹಾಕಿಸಿದ್ದಷ್ಟೆ ಅಲ್ಲದೆ, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.  

ಮೇಲಾಗಿ ಪೀಠಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆಯನ್ನು ಹಾಕಿ, ಇನ್ನು 15 ದಿವಸಗಳೊಳಗೆ ನಿಮ್ಮ ಎಲ್ಲಾ ಜಾಗವನನ್ನು ವಶಕ್ಕೆ ಪಡೆದುಕೊಳ್ಳುತ್ತೇನೆ ತಾಕತ್ತಿದ್ದರೆ ತಡೆಯಿರಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ಪೊಲೀಸ್‌ ವಿಚಾರಣೆಯಲ್ಲಿದೆ.

Share This Article