ಕುಡುಮಲ್ಲಿಗೆ ಬಳಿ ಲಾರಿಯಡಿ ಸಿಲುಕಿದ ಬೈಕ್‌ & ಸವಾರರು | ಬಾಗಲಕೋಟೆಯ ಓರ್ವ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ

bike accident,kudumallige, thirthahalli taluk 

ಕುಡುಮಲ್ಲಿಗೆ ಬಳಿ ಲಾರಿಯಡಿ ಸಿಲುಕಿದ ಬೈಕ್‌ & ಸವಾರರು | ಬಾಗಲಕೋಟೆಯ ಓರ್ವ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ
bike accident,kudumallige, thirthahalli taluk 

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುಡುಮಲ್ಲಿಗೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೈಕ್‌ವೊಂದು ಟೆನ್‌ ವೀಲ್ಹ್‌ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್‌ ಸವಾರ ಲಾರಿ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಆತನನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆ ನಡೆದಿದ್ದು ಹೇಗೆ?

ಇವತ್ತು ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ಬೈಕ್‌ವೊಂದು ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಟೆನ್‌ ವೀಲ್ಹ್‌ ಲಾರಿಗೆ ಡಿಕ್ಕಿಹೊಡೆದಿದೆ. ಇದರಿಂದಾಗಿ ಅವರ ಬೈಕ್ ಲಾರಿಯಡಿಗೆ ಹೋಗಿದೆ.  ಬೈಕ್‌ ಸವಾರ ಕೂಡ ಚಕ್ರದಡಿಯಲ್ಲಿ ಸಿಲುಕಿದ್ದಾನೆ. ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆಯ ಭೀಕರತೆಗೆ ಸಾಕ್ಷಿಯಾಗಿ ಮೃತದೇಹ ಛಿದ್ರವಾಗಿದೆ. ಘಟನೆಯಲ್ಲಿ ಇನ್ನೊಬ್ಬಾತ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಇನ್ನೂ ಬೈಕ್‌ ಸವಾರರು ಬಾಗಲಕೋಟೆಯವರು ಎನ್ನಲಾಗುತ್ತಿದ್ದು, ಅವರ ಹೆಸರು ವಿವರ ತಿಳಿದುಬಂದಿಲ್ಲ. ಸ್ಥಳಕ್ಕೆ ಮಾಳೂರು ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿ ಅಪಘಾತಕ್ಕೀಡಾಡ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.  

SUMMARY | bike accident near kudumallige thirthahalli taluk 

KEY WORDS |‌ bike accident,kudumallige, thirthahalli taluk