SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024
ರಾಜ್ಯ ಸಚಿವ ಸಂಪುಟದ ಚರ್ಚೆಗೆ ರೆಕ್ಕೆಪುಕ್ಕ ಬಲಿತು ಚರ್ಚೆ ಜೋರಾದ ಬೆನ್ನಲ್ಲೆ ಶಿವಮೊಗ್ಗದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು ತಮ್ಮದೊಂದು ದಾಳ ಉರುಳಿಸಿದ್ದಾರೆ. ನಿನ್ನೆದಿನ ಮಾಧ್ಯಮಗಳ ಜೊತೆ ಮಾತನಾಡಿದ ಅವರು,
ಸಚಿವ ಸಂಪುಟದ ಬಗ್ಗೆ ಒಂದು ಬಾರೀ ಚೆರ್ಚೆ ಆಯಿತು, ಈಗ ಈ ವಿಷಯ ತಣ್ಣಾಗಾಗಿದೆ. ಮುಂದಿನ ಮಾರ್ಚ್ನವರೆಗೂ ಕಾಂಗ್ರೆಸ್ ಹಿರಿಯ ಮುಖಂಡರ ರಾಹುಲ್ ಗಾಂಧಿಯವರು ಸಚಿವ ಸಂಪುಟದ ಪ್ರಸ್ತಾಪ ಬೇಡ ಎಂದಿದ್ದಾರೆ. ಹಾಗಾಗಿ ಸಂಪುಟ ವಿಚಾರದ ಚರ್ಚೆ ಈಗ ಅಪ್ರಸ್ತುತ ಎಂದಿದ್ದಾರೆ. ಆದಾಗ್ಯು ನಾನೇನು ಸನ್ಯಾಸಿ ಅಲ್ಲಾ ,ನಾನು ಸಹ ಮೂರು ಬಾರೀ ಶಾಸಕನಾಗಿದ್ದೇನೆ, ನಾನು ಆಕಾಂಕ್ಷಿಯಾಗಿಯೇ ಇರ್ತೇನೆ ಅವಕಾಶ ಕೊಟ್ಟರೆ ಕೆಲಸ ಮಾಡ್ತೇನೆ ಎಂದಿದ್ದಾರೆ. ಹಾಗಂತ ಹೈ ಕಮಾಂಡ್ ಮೇಲೆ ಪ್ರಭಾವ ಬೀರಲ್ಲ ಎಂದು ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.
———————
SUMMARY | Sagar MLA Belur Gopalakrishna said he was also aspiring for a ministerial berth
KEY WORDS | Sagar MLA Belur Gopalakrishna ministerial berth