ದೊಡ್ಡಪೇಟೆ ಪೊಲೀಸರ ಕೈಗೆ ಒಂದು ಕಾಲು ಕೆಜಿ ಮಾಲು ಸಮೇತ ಸಿಕ್ಕಿಬಿದ್ದ ಪೌಜಾನ್‌ & ಗ್ಯಾಂಗ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 8, 2025 ‌‌  

ಶಿವಮೊಗ್ಗ ಪೊಲೀಸ್‌ ದೊಡ್ಡ ಬೇಟೆಯೊಂದನ್ನು ಹಿಡಿದಿದ್ದಾರೆ. ಬರೋಬ್ಬರಿ ಒಂದು ಕಾಲು ಕೆಜಿ ಗಾಂಜಾದ ಜೊತೆಗೆ ಏಳು ಮಂದಿಯನ್ನ ಅರೆಸ್ಟ್‌ ಮಾಡಿದ್ದಾರೆ

ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆ ಕೇಸ್‌ 

ದಿನಾಂಕ : 05-02-2025  ರಂದು ರಾತ್ರಿ ಸಾಗರ ಕಡೆಯಿಂದ ಶಿವಮೊಗ್ಗ ಕಡೆಗೆ ಗಾಂಜಾವನ್ನು ಇನ್ನೋವಾ ಕಾರಿನಲ್ಲಿ ಸಾಗಿಸ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಲೆನಾಡು ಸಿರಿ  ಮುಂಭಾಗ ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅದರಲ್ಲಿ 1 ಕೆಜಿ 217 ಗ್ರಾಂ ತೂಕದ ಒಣ ಗಾಂಜಾ ಇರುವುದು ಗೊತ್ತಾಗಿದೆ. ಹೀಗಾಗಿ ವಾಹನ ಸೀಜ್‌ ಮಾಡಿ ಆರೋಪಿಗಳನ್ನ ಅರೆಸ್ಟ್‌ ಮಾಡಿದ್ದಾರೆ. 

ಆರೋಪಿಗಳು

1) ತನ್ವಿರ್ ಪಾಷಾ @ ಮಾರ್ಕೆಟ್ ಪೌಜಾನ್, 26 ವರ್ಷ ಅಜಾದ್ ನಗರ ಶಿವಮೊಗ್ಗ, 

2) ಅಕೀಪ್ @ ಪುಕ್ಕಿ 28 ವರ್ಷ,  ಆರ್ ಎಂ ಎಲ್ ನಗರ, ಶಿವಮೊಗ್ಗ, 

3) ಮೊಹಮ್ಮದ್ ಇಬ್ರಾಹಿಂ @ ಮುನ್ನ, 25ವರ್ಷ ಅಜಾದ್ ನಗರ ಶಿವಮೊಗ್ಗ, 

4) ಅರ್ಬಾಜ್ ಖಾನ್ @ ಮಜರ್, 26 ವರ್ಷ ಇಳಿಯಾಜ್ ನಗರ ಶಿವಮೊಗ್ಗ, 

5) ಜಾಫರ್ ಸಾದಿಕ್ 25 ವರ್ಷ ಟಿಪ್ಪು ನಗರ ಶಿವಮೊಗ್ಗ,

6) ಅಬ್ದುಲ್ ಅಜೀಜ್ 25 ವರ್ಷ ಸಾವಾಯಿ ಪಾಳ್ಯ ಶಿವಮೊಗ್ಗ

7) ಮೊಹಮ್ಮದ್ ಫೈಝಲ್ @ ಬಚ್ಚಾ ಫೈಝಲ್, 21 ವರ್ಷ ಆರ್ ಎಂ ಎಲ್ ನಗರ 

ಈ ಆರೋಪಿಗಳಿಂದ 1,15,000/-  ರೂಗಳ 1 ಕೆಜಿ 217 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯ ಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 5,00,000/-  ರೂಗಳ ಇನ್ನೋವಾ ಕಾರು ಸೇರಿದಂತೆ ಒಟ್ಟು 6,15,000/-  ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

SUMMARY |  shivamogga doddapete ganja case 

KEY WORDS |  shivamogga doddapete ganja case 

Leave a Comment