SHIVAMOGGA | MALENADUTODAY NEWS | ಮಲೆನಾಡು ಟುಡೆ Jan 9, 2025
ಶಿವಮೊಗ್ಗ ತ್ಯಾವರೆಕೊಪ್ಪ ವನ್ಯಧಾಮ ದಿಂದ ಮತ್ತೊಂದು ಕಹಿ ಸುದ್ದಿ ಬಂದಿದೆ. ಇಲ್ಲಿನ ಹುಲಿಯೊಂದು ಸಾವನ್ನಪ್ಪಿದೆ. Tyavarekoppa Tiger and Lion Safari ಯ ಹುಲಿ 17 ವರ್ಷದ ಅಂಜನಿ ಸಾವನ್ನಪ್ಪಿದೆ. ಮೂರು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಹುಲಿ ಸಾವನ್ನಪ್ಪಿದೆ. ನಿನ್ನೆ ರಾತ್ರಿ ಅಂಜನಿ ಸಾವನ್ನಪ್ಪಿದ್ದು, ಈ ಸಂಬಂಧ ಅಧಿಕಾರಿಗಳು ಮಾಹಿತಿ ನೀಢಿದ್ದಾರೆ.
2022 ರಲ್ಲಿ ಮೈಸೂರಿನ ಮೈಸೂರಿನ ಕೂರ್ಗಳ್ಳಿ ಹುಲಿ ಪುನರ್ವಸತಿ ಕೇಂದ್ರ ಶಿವಮೊಗ್ಗದ ಲಯನ್ ಸಫಾರಿಗೆ ಕರೆತರಲಾಗಿತ್ತು. ಇತ್ತೀಚೆಗೆ ಅಂದರೆ ಸುಮಾರು ಮೂರು ತಿಂಗಳಿಂದ ಹುಲಿ ಅನಾರೋಗ್ಯಕ್ಕೀಡಾಗಿತ್ತು. ಪಶುವೈದ್ಯರ ಚಿಕಿತ್ಸೆಗೂ ಹುಲಿ ಸ್ಪಂದಿಸುತ್ತಿರಲಿಲ್ಲ. ನಿನ್ನೆ ರಾತ್ರಿ ಸಾವನ್ನಪ್ಪಿದೆ. ಪಶು ವೈದ್ಯ ವಿಜ್ಞಾನ ಕಾಲೇಜಿನ ಪಶು ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಅಂಜನಿ ಅಗಲಿಕೆಯಿಂದ ಹುಲಿ ಸಂಖ್ಯೆ ಐದಕ್ಕೆ ಇಳದಿದ್ದು, ಈ ಪೈಕಿ ಒಂದು ಗಂಡು ನಾಲ್ಕು ಹೆಣ್ಣು ಹುಲಿಗಳಿವೆ.
SUMMARY | Another sad news , Tyavarekoppa Wildlife, in Shimoga, tiger died in Tyavarekoppa Wildlife Sanctuary̧ tiger Anjani Tyavarekoppa Tiger and Lion Safari has died
KEY WORDS | Another sad news , Tyavarekoppa Wildlife, in Shimoga, tiger died in Tyavarekoppa Wildlife Sanctuary, tiger Anjani Tyavarekoppa Tiger and Lion Safari has died