SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024
ಅಚ್ಚರಿಯ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬರ ಮನೆಗೆ ಅಪರಿಚಿತ ಶವವನ್ನ ಪೆಟ್ಟಿಗೆಯಲ್ಲಿ ಪಾರ್ಸಲ್ ಕಳುಹಿಸಿರುವ ಘಟನೆಯೊಂದು ಆಂಧ್ರಪ್ರದೇಶ ಯಂಡಗಂಡಿಯಲ್ಲಿ ವರದಿಯಾಗಿದೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬರುವ ಊರು ಯಂಡಗಂಡಿ ಎಂಬ ಗ್ರಾಮದಲ್ಲಿನ ಮನೆಯವರು ಮನೆ ಸಾಮಗ್ರಿ ಎಂದು ಸ್ವೀಕರಿಸಿದ ಪೆಟ್ಟಿಗೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಅಲ್ಲದೆ ಪೆಟ್ಟಿಗೆಯಲ್ಲಿ ಪತ್ರವೊಂದು ಇದ್ದು, ಅದರಲ್ಲಿ ಕುಟುಂಬಸ್ಥರಿಗೆ ಒಂದು ಕೋಟಿ ರೂಪಾಯಿಗೆ ಡಿಮ್ಯಾಂಡ್ ಇಡಲಾಗಿದೆ.
ಇಲ್ಲಿನ ನಿವಾಸಿ ಸಾಗಿ ತುಳಸಿ ಎಂಬವರು ಹೊಸ ಮನೆ ಕಟ್ಟಿಸುತ್ತಿದ್ದಾರೆ. ಅವರ ಮನೆಗೆ ಕಳೆದ ಗುರುವಾರ ರಾತ್ರಿ ಶವ ಇದ್ದ ಪೆಟ್ಟಿಗೆ ಆಟೋರಿಕ್ಷಾದಲ್ಲಿ ಬಂದಿದೆ. ಮನೆ ಕಟ್ಟಲು ಸಹಾಯ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆಗೆ ಮನೆಯ ಎಲೆಕ್ಟ್ರಿಕ್ ಸಾಮಗ್ರಿಗಳು ಪಾರ್ಸಲ್ ಬರುವುದಾಗಿ ಮೊದಲೇ ಹೇಳಿದ್ದರು. ಆಟೋದಲ್ಲಿ ಬಂದ ಪೆಟ್ಟಿಗೆಯಲ್ಲಿ ಎಲೆಕ್ಟ್ರಿಕ್ ಸಾಮಗ್ರಿ ಇರಬಹುದು ಎಂದು ನಂಬಿದ ಮಹಿಳೆ ಆಟೋದಲ್ಲಿ ಬಂದಿದ್ದ ಪಾರ್ಸಲ್ ಪಡೆದುಕೊಂಡಿದ್ದಾರೆ. ಆದರೆ ಅದರಲ್ಲಿ ಅಪರಿಚಿತ ವ್ಯಕ್ತಿ ಶವ ಹಾಗೂ ಬೆದರಿಕೆ ಪತ್ರ ಪತ್ತೆಯಾಗಿದೆ.
ಪತ್ರದಲ್ಲಿ ತುಳಸಿಯವರ ಪತಿ 3 ಲಕ್ಷ ರೂಪಾಯಿ ಸಾಲ ಪಡೆದು ನಾಪತ್ತೆಯಾಗಿದ್ದಾರೆ. ಇದೀಗ ಸಾಲದ ಮೊತ್ತ ಒಂದು ಕಾಲು ಕೋಟಿಯಾಗಿದೆ ಎನ್ನಲಾಗಿದೆ. ಕುಟುಂಬಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನುವುದಾದರೆ, ಸಾಲ ಪಾವತಿಸಬೇಕು ಎಂದು ಬರೆಯಲಾಗಿದೆ. ಇನ್ನೂ ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಅಪರಿಚಿತ ಶವ ಯಾರದ್ದು ಎಂದು ಪತ್ತೆ ಹಚ್ಚುವಲ್ಲಿ ನಿರತಾಗಿದ್ದಾರೆ.
SUMMARY | a shocking incident that took place in West Godavari district, a dead body was delivered to a family in Yandagandi village of Undi mandal.
KEY WORDS | shocking incident that took place ,West Godavari district, dead body was delivered to a family, Yendagandi village , Undi mandal, andhra pradesh