ಟ್ರಯಲ್​ ನೋಡುವುದಾಗಿ ಹೇಳಿ ಬೈಕನ್ನೇ ಕದ್ದೊಯ್ದ ಬೆಂಗಳೂರು ನಿವಾಸಿ! ಶಿವಮೊಗ್ಗ ಬಸ್​ ಸ್ಟ್ಯಾಂಡ್​ ಹತ್ತಿರ ಏನಿದು!?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 9, 2025 ‌‌ 

ಶಿವಮೊಗ್ಗದಲ್ಲಿ ಇಂಟ್ರಸ್ಟಿಂಗ್ ಆಗಿರುವ ಪ್ರಕರಣವೊಂದು ವರದಿಯಾಗಿದೆ. ಬೈಕ್​ ಟ್ರಯಲ್​ ನೋಡುತ್ತೇನೆ ಎಂದು ಅದನ್ನು ರೈಡ್ ಮಾಡಿಕೊಂಡು ಹೋದ ವ್ಯಕ್ತಿಯೊಬ್ಬ, ಬೈಕ್ ಸಮೇತ ನಾಪತ್ತೆಯಾದ ಬಗ್ಗೆ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. 

ಪ್ರಕರಣದ ವಿವರ |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿವಾಸಿಯೊಬ್ಬರು ತಮ್ಮ ಪಲ್ಸರ್ ಬೈಕ್ ಮಾರಾಟ ಮಾಡುವವರಿದ್ದರು. ಇದಕ್ಕಾಗಿ ಫೇಸ್​ಬುಕ್​ನಲ್ಲಿ ಬೈಕ್​ ವಿವರ ಹಾಗೂ ರೇಟು ಸೇರಿದಂತೆ ಇತ್ಯಾದಿ ಮಾಹಿತಿ ಪ್ರಕಟಿಸಿದ್ದರು. ಇದನ್ನು ಆಧರಿಸಿ ಬೆಂಗಳೂರು ನಿವಾಸಿ ಎಂದು ಹೇಳಿಕೊಂಡ ನವೀನ್ ಎಂಬವರು ಸಂತ್ರಸ್ತರಿಗೆ ಕರೆ ಮಾಡಿದ್ದಾರೆ. 

ಫೋನ್​ನಲ್ಲಿ ನಂಬಿಕೆ ಬರುವ ಹಾಗೆ ಮಾತುಕತೆ ನಡೆಸಿದ್ದ ನವೀನ್​, ಬಳಿಕ ಮಾರ್ಚ್​ 30 ರಂದು ಶಿವಮೊಗ್ಗಕ್ಕೆ ಬಂದಿದ್ದ. ಕೆಎಸ್​ಆರ್​ಟಿಸಿ ಬಸ್​ ಸ್ಟಾಪ್​  ಬಳಿಕ ಹೊಸನಗರದ ಬೈಕ್ ಮಾಲೀಕನನ್ನು ಭೇಟಿಯಾದ ನವೀನ್ ಇಲ್ಲಿರುವ ಅಶೋಕ್ ಹೋಟೆಲ್​ ಬಳಿ ಮಾರಾಟಕ್ಕಿದ್ದ ಪಲ್ಸರ್ ಬೈಕ್​ ನೋಡಿ ಪರಿಶೀಲನೆ ಮಾಡಿದ್ದ. ಆನಂತರ ಒಂದು ಲಕ್ಷದ ತೊಂಬತ್ತು ಸಾವಿರಕ್ಕೆ ವ್ಯಾಪಾರ ಕುದುರಿಸಿದ್ದ ನವೀನ್​ ಬೈಕ್​ ಟ್ರಯಲ್​ ನೋಡುವುದಾಗಿ ಹೇಳಿದ್ದ. ಇದನ್ನ ನಂಬಿ ಬೈಕ್ ಮಾಲೀಕ, ಬೈಕ್ ನೀಡಿದ್ದರು. ಆದರೆ ಟ್ರಯಲ್​ಗೆ ಅಂತಾ ಬೈಕ್ ತೆಗೆದುಕೊಂಡು ಹೋದ ನವೀನ್ ಫೋನ್ ರಿಸೀವ್ ಮಾಡದೇ ನಾಪತ್ತೆಯಾಗಿದ್ದ. ಹೀಗಾಗಿ ಬೇರೆ ದಾರಿ ಕಾಣದೇ ಬೈಕ್ ಮಾಲೀಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ನೀಡಿದ್ದಾರೆ.

Share This Article