SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 21, 2024
ಸೊರಬ | ಶಸ್ತ್ರಚಿಕಿತ್ಸೆಗೆಂದು ಅಮೇರಿಕಾಗೆ ತೆರಳಿರುವ ಶಿವಣ್ಣಗೆ ಅವರ ಅಭಿಮಾನಿಗಳ ಆಶಿರ್ವಾದವೇ ಶ್ರೀ ರಕ್ಷೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹೇಳಿದರು.
ಇಂದು ಸೊರಬದ ಕುಬಟೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಣ್ಣ ಈಗಾಗಲೇ ಅಮೆರಿಕಾದ ಮಿಯಾಮಿ ಆಸ್ಪತ್ರೆಯನ್ನು ತಲುಪಿದ್ದಾರೆ. ಅವರಿಗೆ ಡಿಸೆಂಬರ್ 24 ರಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ. ನಾಳೆ ಸಂಜೆ ನಾನು ಅಮೆರಿಕಾಗೆ ತೆರಳಿ ಅವರ ಜೊತೆಯಲ್ಲಿ ಇರುತ್ತೇನೆ ಎಂದರು. ವಿಶ್ವದ ಬೆಸ್ಟ್ ಡಾಕ್ಟರ್ ಶಿವಣ್ಣಗೆ ಚಿಕಿತ್ಸೆ ನೀಡಲಿದ್ದಾರೆ. ಚಿಕಿತ್ಸೆ ಬಳಿಕ ಶಿವಣ್ಣ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದು, ಒಂದು ತಿಂಗಳ ಕಾಲ ಅಮೆರಿಕಾದಲ್ಲಿ ಇರಲಿದ್ದಾರೆ. ಒಂದುವರೆ ತಿಂಗಳ ನಂತರ ಶಿವಣ್ಣ ಬೆಂಗಳೂರಿಗೆ ಬರುತ್ತಾರೆ. ಅಭಿಮಾನಿಗಳ ಅಶೀವಾರ್ದ ಅವರಿಗೆ ಸದಾ ಶ್ರೀ ರಕ್ಷೆ ಎಂದರು.
SUMMARY | Education Minister Madhu Bangarappa said that Shivanna, who has gone to the US for a cancer surgery, is blessed by his fans.
KEYWORDS | Education Minister, Madhu Bangarappa, Shivanna,