SHIVAMOGGA | MALENADUTODAY NEWS | ಮಲೆನಾಡು ಟುಡೆ Jan 2, 2025
ಶಿವಮೊಗ್ಗದಲ್ಲಿ ಕಾಣೆಯಾದವರ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದ್ದು ನಾಪತ್ತೆಯಾದವರ ಸುಳಿವು ನೀಡುವಂತೆ ಜನರಲ್ಲಿ ಮನವಿ ಮಾಡಿದೆ. ಪೊಲೀಸ್ ಇಲಾಖೆ ನೀಡಿರುವ ಯಥಾವತ್ತು ಪ್ರಕಟಣೆ ಹೀಗಿದೆ.
ಶಿವಮೊಗ್ಗ, ಜನವರಿ 02 (ಕರ್ನಾಟಕ ವಾರ್ತೆ) | ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಮುಂಬಾಪುರ ಗ್ರಾಮ ವಾಸಿ 47 ವರ್ಷದ ಕೃಷ್ಣಪ್ಪ ಎಂಬುವವರು ನವೆಂಬರ್ 2024 ರಲ್ಲಿ ಕಾಣೆಯಾದವರು ಈ ವರೆಗೆ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.3 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮೈಮೇಲೆ ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಬೇಡರಹೊಸಳ್ಳಿ ಗ್ರಾಮ ವಾಸಿ ರಮೇಶ್ ಎಂಬುವವರ ಮಗ 17 ವರ್ಷದ ಭರತ್ ಎಂಬುವವರು ಜೂನ್ 2023ರಲ್ಲಿ ಕಾಣೆಯಾದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಈ ಇಬ್ಬರು ವ್ಯಕ್ತಿಗಳ ಸುಳಿವು ದೊರೆತಲ್ಲಿ ಕಂಟ್ರೋಲ್ ರೂಂ. ನಂ.100 ಅಥವಾ ಗ್ರಾ.ಪೊ.ಠಾಣೆ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
————
SUMMARY | Details of missing persons in various police stations in Shivamogga
KEY WORDS | Details of missing persons, police stations in Shivamogga