SHIVAMOGGA | MALENADUTODAY NEWS | ಮಲೆನಾಡು ಟುಡೆ Jan 8, 2025
ಬರುವ ಸಂಕ್ರಾಂತಿಗೆ ಗೃಹಿಣಿಯರಿಗೆ ಗೃಹಲಕ್ಷ್ಮೀ ಯೋಜನೆಯ 16 ನೇ ಕಂತಿನ ಹಣ ಸಿಗಲಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲರವರು ಇದೇ ಜನವರಿ 14 ರಿಂದ ಗೃಹಲಕ್ಷ್ಮೀ ಯೋಜನೆಯ16 ನೇ ಕಂತಿನ ಹಣ ಜಮೆಯಾಗಲಿದೆ ಎಂದಿದ್ದಾರೆ.
ಗೃಹಲಕ್ಷ್ಮಿಯ ಯೋಜನೆಯ ಡಿಸೆಂಬರ್ ತಿಂಗಳ ಕಂತಿನ ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದಿರುವ ಅವರು, ಹಣವನ್ನು ಆರ್ಥಿಕ ಇಲಾಖೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ. ಜನವರಿ 14ನೇ ತಾರೀಖಿನಿಂದ ಹಣದ ಜಮೆ ಆರಂಭವಾಗಲಿದೆ. ಈ ಬಗ್ಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಳಾರ್ ರವರು ಮಾಹತಿ ನೀಡಿದ್ದಾರೆ ಎಂದ ಚಂದ್ರಭೂಪಾಲ್ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗದೇ ಇರುವ ಫಲಾನುಭವಿಗಳು ಮೊದಲು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು ಇದರ ಜೊತೆಗೆ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ.
SUMMARY | gruha lakshmi yojana,gruha lakshmi scheme money transfer delayed,gruhalakshmi yojana,gruhalakshmi scheme,beneficiaries not receiving money in gruha lakhsmi scheme,gruhalakshmi,gruhalakshmi yojana status check,gruhalakshmi yojana today news,gruhalakshmi amount,gruhalakshmi yojana amount checking,june month gruhalakshmi,gruhalakshmi yojana how to apply,money,how to get 2000 gruhalakshmi yojana,gruhalakshmi yojana amount not credited in kannada
KEY WORDS | gruha lakshmi yojana,gruha lakshmi scheme money transfer delayed,gruhalakshmi yojana,gruhalakshmi scheme,beneficiaries not receiving money in gruha lakhsmi scheme,gruhalakshmi,gruhalakshmi yojana status check,gruhalakshmi yojana today news,gruhalakshmi amount,gruhalakshmi yojana amount checking,june month gruhalakshmi,gruhalakshmi yojana how to apply,money,how to get 2000 gruhalakshmi yojana,gruhalakshmi yojana amount not credited in kannada