ಗುಡ್ಡೆಕಲ್‌ನಲ್ಲಿ ಫೈಟ್‌, ರಾಗಿಗುಡ್ಡದಲ್ಲಿ ಕಳವು, ಭದ್ರಾವತಿಯಲ್ಲಿ ಜೂಜು | ಶಿವಮೊಗ್ಗದ ಚಟ್‌ಪಟ್‌ ಸುದ್ದಿಗಳು

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 6, 2025 ‌‌ 

ಶಿವಮೊಗ್ಗದಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರಣೆ ನೀಡುವ ಮಲೆನಾಡು ಟುಡೆಯ ವರದಿ ಇವತ್ತಿನ ಚಟ್‌ಪಟ್‌ ನ್ಯೂಸ್‌ ಇಲ್ಲಿದ ಎ

ಸುದ್ದಿ 1 | ಕೊಡಗಿನ ವಿರಾಜ್‌ ಪೇಟೆಗೆ ಹೋಗುವ ಸಲುವಾಗಿ ಮೈಸೂರು ಬಸ್‌ ಹತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ  ಚಿನ್ನದ ಸರ ಇತ್ಯಾದಿಗಳಿದ್ದ ಪರ್ಸ್‌ ಕದಿಯಲಾಗಿದೆ. ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಳ್ಳರ ತಾಣವಾಗುತ್ತಿದ್ದು ಸಂಬಂಧಿಸಿದ ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಶಿಕಾರಿಪುರದ ಮಾರಿಜಾತ್ರೆ ಹಿನ್ನೆಲೆಯಲ್ಲಿ ಅಕ್ಕನ ಮನೆಗೆ ಹೊರಟಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಲಾಗಿದೆ.

ಸುದ್ದಿ 2 | ಶಿವಮೊಗ್ಗದ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಗುಡ್ಡೆಕಲ್‌ ಬಳಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಮದುವೆ ಕಾರ್ಯಕ್ರಮ ಒಂದರ ವಿಚಾರವವಾಗಿ ಎರಡು ಗುಂಪುಗಳ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದು, ಈ ಘಟನೆಯಲ್ಲಿ ಎರಡು ವಾಹನಗಳ ಜಖಂ ಆಗಿದೆ ಎಂದು ಹೇಳಲಾಗುತ್ತಿದೆ.

ಸುದ್ದಿ 3 | ಶಿವಮೊಗ್ಗ ಸಿಟಿಯ ವ್ಯಾಪ್ತಿಯ ರಾಗಿಗುಡ್ಡದ ವಿಷ್ಣು ಮಹೇಶ್ವರ ದೇವಾಲಯದಲ್ಲಿ ಕಳ್ಳರು ಹಳೆಯ ಘಂಟೆಯೊಂದನ್ನು ಕದ್ದು ಪರಾರಿಯಾಗಿದ್ದಾರೆ. ಸದ್ಯ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗುತ್ತಿದ್ದು, ಈ ಸಮಯವನ್ನೆ ಬಳಸಿಕೊಂಡ ಕಳ್ಳರು ಸುಮಾರು 121 ಕೆಜಿ ತೂಕದ ಹಿತ್ತಾಳೆ ಘಂಟೆಯನ್ನು ಕದ್ದಿದ್ದಾರೆ. 

ಸುದ್ದಿ 4 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ತೀರ್ಥಹಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಂಗಡಿಯೊಂದರಲ್ಲಿ ಕಳ್ಳರು ಕರಾಮತ್ತು ತೋರಿದ್ದಾರೆ. ಇಲ್ಲಿನ ಸ್ಟೆಷನರಿ ಅಂಗಡಿಯೊಂದರಲ್ಲಿ ಕಳ್ಳರು ಕಳ್ಳತನವೆಸಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಕಳ್ಳನಿಗಾಗಿ ಹುಡುಕಾಟ ಇನ್ನಷ್ಟೆ ನಡೆಯಬೇಕಿದ್ದು, ಎಷ್ಟು ಹಣ ಸಾಮಾಗ್ರಿ ಕಳ್ಳತನಾಗಿದೆ ಎಂಬುದು ಸ್ಪಷ್ಟವಾಗಿಲ್ಲ. 

ಸುದ್ದಿ 5  | ಅತ್ತ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೂಜಾಡುತ್ತಿದ್ದವರ ಬಗ್ಗೆ ಸ್ಥಳೀಯರೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಪೊಲೀಸ್‌ ವ್ಯಾನ್‌ ಕಂಡು ಜೂಜಾಡುತ್ತಿದ್ದವರು ಓಡಿ ಹೋಗಿದ್ದಾರೆ. ಇಲ್ಲಿನ ತೋಟವೊಂದರಲ್ಲಿ ಜೂಜಾಡುತ್ತಿದ್ದ ಆರೋಪಿಗಳು 112 ಪೊಲೀಸ್‌ ವ್ಯಾನ್‌ ನೋಡುತ್ತಲೇ ಎಸ್ಕೇಪ್‌ ಆಗಿದ್ದಾರೆ. 

SUMMARY |  shivamogga shorts news

KEY WORDS |  shivamogga shorts news

Leave a Comment