SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಉಡುಪಿಯಿಂದ ಕೊಪ್ಪಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಸ್ ಉಡುಪಿಯಿಂದ ಆಗುಂಬೆ ಘಾಟಿ ಹತ್ತಿ ಮೇಲಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.
ಘಟನೆಯ ವಿವರ
ಉಡುಪಿ ಟು ಕೊಪ್ಪ ರೂಟ್‌ನ ಬಸ್‌ನಲ್ಲಿ ಪರ್ಕಳದಿಂದ ಪ್ರಯಾಣಿಸಿದ ಪ್ರಯಾಣಿಕರೊಬ್ಬರು ಕೊಪ್ಪಕ್ಕೆ ಹೋಗುವರಿದ್ದರು. ಆಗುಂಬೆಯ ಸಮೀಪ ಅವರಿಗೆ ಬಸ್ ನಲ್ಲಿಯೇ ಹೃದಯಾಘಾತವಾಗಿದೆ. ಅವರನ್ನು ತಕ್ಷಣವೇ ಆಗುಂಬೆ ಪ್ರಾಥಮಿಕ ಕೇಂದ್ರಕ್ಕೆ ಕರೆತರಲಾಗಿತ್ತು. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ಆಗುಂಬೆಯ ವೈದ್ಯ ಅನಿಕೇತನ ದೃಢಪಡಿಸಿದ್ದರು. ಆ ಬಳಿಕ ಮೃತದೇಹವನ್ನು ಸ್ಥಳೀಯ ಆಂಬುಲೆನ್ಸ್‌ಗೆ ಶಿಫ್ಟ್ ಮಾಡಿ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಬಳಿಕ ಬಸ್‌ನ ಉಳಿದ ಪ್ರಯಾಣಿಕರ ಜೊತೆ ಕೊಪ್ಪಕ್ಕೆ ತೆರಳಿದೆ. ಮೃತರನ್ನು ಕೊಪ್ಪ ಮೂಲದ ಹರೀಶ್ ಎಂದು ಗುರುತಿಸಲಾಗಿದೆ.
SUMMARY | passenger from Koppa died of heart attack in Udupi-Koppa bus near Agumbe.
KEY WORDS | passenger from Koppa died bus, heart attack, Udupi-Koppa bus , Agumbe