ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

13

SHIVAMOGGA | MALENADUTODAY NEWS | Aug 19, 2024  ಮಲೆನಾಡು ಟುಡೆ   

ನರಗುಂದ ತಾಲ್ಲೂಕಿನ ಕೊಣ್ಣೂರ ಬಳಿ ನಿನ್ನೆ ದಿನ ಭಾನುವಾರ ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಬಸ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

- Advertisement -

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಹಾವೇರಿಯ ರುದ್ರಪ್ಪ ಬಾಬಣ್ಣ ಅಂಗಡಿ (58) ಅವರ ಪತ್ನಿ ರಾಜೇಶ್ವರಿ (50), ಪುತ್ರಿ ಐಶ್ವರ್ಯ (18) ಹಾಗೂ ಪುತ್ರ ವಿಜಯಕುಮಾರ್ (14) ಮೃತರು. 

ಹಾವೇರಿಯಿಂದ ಕೊಣ್ಣೂರ ಮಾರ್ಗವಾಗಿ ಕಲ್ಲಾಪುರದ ಬಸವಣ್ಣ ದೇವರ ದೇವಸ್ಥಾನಕ್ಕೆ ಇವರೆಲ್ಲಾ ಹೊರಟಿದ್ದರು. ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿಯಾಗಿದೆ. ಕಾರು ಚಲಾಯಿಸುತ್ತಿದ್ದ ರುದ್ರಪ್ಪ ಅವರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.   

ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

Share This Article