ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ಹಾರು ಬೆಕ್ಕನ್ನ ಬೇಟೆಯಾಡಿದ ಆರೋಪ ಸಂಬಂಧ ಓರ್ವನನ್ನ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ
SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾರು ಬೆಕ್ಕನ್ನು ಬೇಟೆಯಾಡಿರುವ ಆರೋಪಿಯೊಬ್ಬನನ್ನ ಬಂಧಿಸಿದೆ.
ಅಧಿಕೃತ ಮಾಹಿತಿ ಮೇರೆಗೆ ಅಳಿವಿನಂಚಿನಲ್ಲಿರುವ ಅತಿ ಅಪರೂಪದ ವನ್ಯಜೀವಿ ಹಾರು ಬೆಕ್ಕಿನ ಅಕ್ರಮ ಬೇಟೆ ಯಾಡಿದ ಆರೋಪದ ಮೇಲೆ ಆರೋಪಿಯನ್ನು ಬಂದಿಸಲಾಗಿದೆ.
ನಗರ ವಲಯ ಅರಣ್ಯ ವ್ಯಾಪ್ತಿಯ ಹುಂಚಾ ಹೋಬಳಿ ಬಾಳೆಕೊಪ್ಪ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಇಲ್ಲಿನ ಸರ್ವೆ ನಂಬರ್ 17 ರ ಕೃಷಿ ಜಮೀನಿನಲ್ಲಿ ಹಾರು ಬೆಕ್ಕನ್ನು ಬೇಟೆ ಮಾಡಿದ ಆರೋಪದ ಮೇಲೆ ಸತೀಶ್ ಎಂಬಾತನನ್ನ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ