SHIVAMOGGA| MALENADUTODAY NEWS | ಮಲೆನಾಡು ಟುಡೆ Apr 1, 2025
ಯುಗಾದಿ ಹಬ್ಬದ ಪ್ರಯುಕ್ತವಾಗಿಯೇ ತುಂಗಭದ್ರಾ ನದಿಯ ಸಂಗಮ ಸ್ಥಳದಲ್ಲಿ ನಡೆಯುವ ಸಂಗಮೇಶ್ವರ ಜಾತ್ರೆ ನಿನ್ನೆದಿನ ಭಾರೀ ಅದ್ದೂರಿಯಾಗಿ ನಡೆಯಿತು.
ಹೊಳೆಹೊನ್ನೂರು ಸಮೀಪದ ಕೂಡ್ಲಿ ಗ್ರಾಮದಲ್ಲಿ ಸಿಗುವ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಈ ಜಾತ್ರೆ ಪ್ರತಿವರ್ಷ ಯುಗಾದಿಯ ಮರುದಿನ ನಡೆಯುತ್ತದೆ. ಸಂಗಮೇಶ್ವರ ದೇವರ ಜಾತ್ರೆ ಹಾಗೂ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
ಶಿಕ್ಷೇತ್ರಕ್ಕೆ ಬರುವ ಭಕ್ತರು ಮೊದಲು ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಆನಂತರ ನೆನೆದ ಬಟ್ಟೆಯಲ್ಲಿಯೇ ಸಂಗಮೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಬಳಿಕ ರಥೋತ್ಸದಲ್ಲಿ ಪಾಲ್ಗೊಳ್ಳುತ್ತಾರೆ.
ಇನ್ನೂ ನಿನ್ನೆಯ ಜಾತ್ರೆಯಲ್ಲಿ ಇಡೀ ಊರು ಹೊಸ ಕಳೆ ಪಡೆದುಕೊಂಡಿತ್ತು. ಜಾತ್ರೆಯ ವಹಿವಾಟು ಜೋರಾಗಿದ್ದರೆ, ಭಕ್ತರ ರಶ್‌ನಲ್ಲಿ ವಾದ್ಯಮೇಳಗಳ ಸದ್ದುಗಳು ಮನಸ್ಸಿಗೆ ಮುದ ಕೊಟ್ಟಿತ್ತು.
ಸಂಗಮಸ್ಥಳದಿಂದ ಸಂಗಮೇಶ್ವರ ಸನ್ನಿಧಿ ಹೊಳೆ ದಂಡೆಯ ಮೇಲಿದೆ. ಹೀಗಾಗಿ ಅಲ್ಲಿಗೆ ಸಂಗಮ ಸ್ಥಳದಿಂದ ತೆಪ್ಪದಲ್ಲಿ ತೆರಳಿ ನೂರಾರು ಮಂದಿ ಪೂಜೆ ಸಲ್ಲಿಸುತ್ತಾರೆ.ಅಲ್ಲದೆ ನೀರಿನ ಪ್ರಮಾಣ ಕಡಿಮೆ ಇರುವ ಕಡೆ ಜನರು ನದಿಯಲ್ಲಿಯೇ ನಡೆದು ಸಾಗುತ್ತಾರೆ. ಈ ದೃಶ್ಯ ವಿಶೇಷವಾಗಿರುತ್ತದೆ.
ಇಷ್ಟೆ ಅಲ್ಲದೆ ಹೊಳೆ ದಂಡೆಯಲ್ಲಿ ನಡೆಯುವ ಜಾತ್ರೆಯಾದ್ದರಿಂದ ಇದನ್ನು ಹೊಳೆ ಜಾತ್ರೆ ಎನ್ನಲಾಗುತ್ತದೆ. ಊರಿನ ಜನರ ಜೊತೆ ಊರ ದೇವರಗಳನ್ನು ಹೊತ್ತು ತರುವ ಮಂದಿ, ಹೊಳೆ ದಂಡೆಯಲ್ಲಿ ಊರ ದೇವರಿಗೆ ತುಂಗ ಭದ್ರೆಯ ಸಂಗಮ ತೀರ್ಥ