SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024
ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟಿದ್ದೀರಾ! ಹಾಗಾದರೆ ಈ ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾಷಷ್ಟಿ ಜಾತ್ರೆ ನಡೆಯುವ ಹಿನ್ನೆಯಲ್ಲಿ ಇದೇ ನವೆಂಬರ್ 27 ರಿಂದ ಡಿಸೆಂಬರ್ 12 ರ ತನಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರ್ಪ ಸಂಸ್ಕಾರ ಸೇವೆ ನವೆಂಬರ್ 25 ರಿಂದ ಡಿಸೆಂಬರ್ 12 ತನಕ ನೆರವೇರುವುದಿಲ್ಲ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ. ಅಲ್ಲದೆ ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವು ಸೇವೆಗಳು ನೆರವೇರುವುದಿಲ್ಲ ಎಂದು ದೇಗುಲದಿಂದ ಪ್ರಕಟಣೆ ನೀಡಲಾಗಿದೆ.
ನವೆಂಬರ್ 30 ಕ್ಕೆ ಲಕ್ಷದೀಪೋತ್ಸವ, ಡಿಸೆಂಬರ್ 5 ಕ್ಕೆ ಚೌತಿ ಹಾಗೂ ಡಿಸೆಂಬರ್ ಆರಕ್ಕೆ ಪಂಚಮಿ ಇರಲಿದ್ದು ಆ ದಿನಗಳಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ ಡಿಸೆಂಬರ್ ಎಳರಂದು ನಡೆಯಲಿದ್ದು ಆ ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ನ.30, ಡಿ.5, ಡಿ.6, ಡಿ.7 ಮತ್ತು ಡಿ.12ರಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ. ನ.27ರಿಂದ ಡಿ.12ರ ತನಕ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ನೆರವೇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಾರ್ಷಿಕ ಚಂಪಾಷ್ಠಿ ಜಾತ್ರ ಮಹೋತ್ಸವದ ಕಾರಣ ನ.26 ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯದಿಂದ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ಭಕ್ತಾಧಿಗಳಿಗೆ ದೇವರ ದರುಶನ ಹಾಗೂ ಸೇವೆ ಇರುವುದಿಲ್ಲ. ಎರಡು ಗಂಟೆಯ ಬಳಿಕ ಶ್ರೀ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ಮಾಡಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
SUMMARY | Subrahmanya Sashti 2024 in kukke subramanya temple starts November 27 to December 12. sarpa samskara seva will not be performed from November 25 to December 12,
KEY WORDS | Kukke Subramanya Champashasti Mahotsavam , Subrahmanya Sashti 2024, Kukke Subramanya Sarpa Samskara Pooja Booking, kukke subramanya temple,sarpa samskara