SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024
ಚಿಕ್ಕಮಗಳೂರು ಕೊಪ್ಪ ತಾಲ್ಲುಕು ಕಡೇಗುಂದಿ ಗ್ರಾಮದಲ್ಲಿರುವ ಒಂಟಿಮನೆ ಸುಬ್ಬಗೌಡ ನಿವಾಸಕ್ಕೆ ಬಂದ ನಕ್ಸಲ್‌ರ ತಂಡ ಯಾರು? ಮುಂಡಗಾರು ಲತಾಳ ಆ ಟೀಂನ ನೇತೃತ್ವ ವಹಿಸಿದ್ದಳೆ? ಹೌದು ಎನ್ನುತ್ತಿರುವ ಚಿಕ್ಕಮಗಳೂರು ಪೊಲೀಸರು ಈ ಸಂಬಂಧ ಉಪಾ ಅಥವಾ UAPA ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಿದೆ.
ಯಾರು ಈಕೆ ಮುಂಡಗಾರು ಲತಾ?
ಕೊಪ್ಪ ತಾಲೂಕಿನ ಬುಕ್ಕಡಿ ಬೈಲಿನ ಮುಂಡಗಾರು ಲತಾಳಿಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಲತಾ ಗುರುತಿಸಿಕೊಂಡಿದ್ದಳು. ಪೊಲೀಸರು ರಿಲೀಸ್ ಮಾಡಿರುವ ಮೋಸ್ಟ್ ವಾಂಟೆಂಡ್ ಲೀಸ್ಟ್ ನಲ್ಲಿ ಲತಾ ಕೂಡ ಒಬ್ಬಳು.
ಇವಳ ಜಾಡು ಪತ್ತೆ ಮಾಡಿಕೊಟ್ಟವರಿಗೆ ಸರ್ಕಾರ ಐದು ಲಕ್ಷ ಬಹುಮಾನ ಘೋಷಿಸಿದೆ. ಮಲೆನಾಡಿನ ಶೋಷಿತ ದಮನಿತರ ಪರ ಹೋರಾಟ ಎಂದು ನಂಬಿದ ಲತಾ ನಂತರ ಬಂದೂಕು ಹೆಗಲಿಗೇರಿಸಿಕೊಂಡು ಕ್ರಾಂತಿಯ ಹಾದಿ ಹಿಡಿದಾಗ ಜನರೇ ದಿಗ್ಬ್ರಮೆಗೊಳಗಾದ್ರು. ತಾನು ಹೋಗುತ್ತಿರುವ ಹಾದಿ ಸರಿಯಿಲ್ಲ ಎಂದು ಗೊತ್ತಾಗೋ ಹೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು..ಪೊಲೀಸರು ಮೋಸ್ಟ್ ವಾಂಟೆಂಡ್ ಕರಪತ್ರವನ್ನು ಬಹಿರಂಗಗೊಳಿಸಿದ್ರು. ಅಲ್ಲಿಂದ ಇಲ್ಲಿವರೆಗೂ ಭೂಗತವಾಗಿಯೇ ಇರುವ ಲತಾ..ಬಿಜಿಕೆ ತಂಡದಲ್ಲಿ ಗುರುತಿಸಿಕೊಂಡಿದ್ದಳು.
ಕೇರಳದ ಗಡಿಭಾಗದಲ್ಲಿ ನಕ್ಸಲರು ಅಡಗಿದ ತಂಗುದಾಣದ ಮೇಲೆ ಪೊಲೀಸರು ಒಮ್ಮ ಫೈರಿಂಗ್ ನಡೆಸಿದ್ದರು. ಈ ಕ್ಯಾಂಪ್ ನಲ್ಲಿ ಮುಂಡಗಾರು ಲತಾ ಇದ್ದಳು ಎಂಬ ಖಚಿತ ಮಾಹಿತಿ ಮೇರೆಗೆ ಅಂದಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಅದನ್ನ ನಂಬುವ ಸ್ಥಿತಿಯಲ್ಲಿ ಪೊಲೀಸರು ಇರಲಿಲ್ಲ. ಏಕೆಂದರೆ, ಪೈರಿಂಗ್ ಸಂದರ್ಭದಲ್ಲಿ ಮುಂಡಗಾರು ಲತಾ. ತಪ್ಪಿಸಿಕೊಂಡಿದ್ದಾಳೆ ಎನ್ನುವುದು ಪೊಲೀಸರ ನಂಬಿಕೆಯಾಗಿತ್ತು. ಆ ಬಳಿಕ ಮುಂಡಗಾರು ಲತಾ ಮಂಗಳೂರು ಗೆ ಹೊರಡುವ ರೈಲು ಹತ್ತಿದ್ದಾಳೆ. ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರದಲ್ಲಿ ಆಕೆಯ ದೃಶ್ಯ ಸೆರೆಯಾಗಿದೆ ಎಂದು ಪೊಲೀಸ್ ಇಲಾಖೆಯ ಅಂತರಾಳದ ಇನ್ಫಾರ್ಮೇಶನ್ ಹೇಳಿತ್ತು. ನಂತರ ಆಕೆಯ ಲೊಕೇಷನ್ ಟ್ರೇಸ್ ಮಾಡಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಇದೀಗ ಕಡೇಗುಂದಿಗೆ ಬಂದಿದ್ದು ಆಕೆಯ ನೇತೃತ್ವದ ತಂಡ ಎಂದು ಚಿಕ್ಕಮಗಳೂರು ಪೊಲೀಸ್ ಹೇಳುತ್ತಿದ್ದಾರೆ. ಲತಾ, ಜಯಣ್ಣ ಮತ್ತು ಇನ್ನಿಬ್ಬರು ನಕ್ಸಲರು ಸುಬ್ಬೇಗೌಡರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಎಎನ್‌ಎಫ್ ರೇಡ್‌ನ ಸುದ್ದಿ ತಿಳಿದು ಅವರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎಂಬುದು ಮಾಹಿತಿ.
ಇನ್ನೂ ಕಾರ್ಯಾಚರಣೆಯಲ್ಲಿ ಆ ಮನೆಯಲ್ಲಿ ಮೂರು ಬಂದೂಕು, ಮದ್ದುಗುಂಡು, ಮಾಂಸ ಕೂಡ ಪತ್ತೆಯಾಗಿದೆ. ಕ್ಯಾಲೆಂಡರ್ ಒಂದರಲ್ಲಿ ‘ನಕ್ಷತ್ರ’ ಮಾದರಿಯ ಗುರುತನ್ನು ಮಾಡಿರುವುದು ಪೊಲೀಸರ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ. ಇವೆಲ್ಲದನ್ನ ಆಧರಿಸಿ ಜಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ಫೈಲ್ ಆಗಿದೆ. ಅಲ್ಲದೆ ಎಎನ್‌ಎಫ್ ತಂಡ ಸ್ಥಳದಲ್ಲಿಯೇ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮತ್ತು ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ನಡೆಸ್ತಿದ್ದಾರೆ.
ಕೇರಳದ ಥಂಡರ್ ಬೋಲ್ಟ್ ಟೀಂ ನಕ್ಸಲರ ವಿರುದ್ಧ ಕಾರ್ಯಾಚರಣೆ ಬಿಗಿ ಮಾಡಿದ ಬೆನ್ನಲ್ಲೆ ಬಿಜಿಕೆ ಸಿಕ್ಕಿಬಿದ್ದಿದ್ದ, ಆನಂತರ ಪ್ರಭಾ ಶರಣಾಗಿದ್ದಳು, ಅಲ್ಲದೆ ಇನ್ನಷ್ಟು ನಕ್ಸಲರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಬೆಳವಣಿಗೆ ಬಳಿಕ ನಕ್ಸಲರ ತಂಡ ಕರ್ನಾಟಕದ ಗಡಿಗೆ ಶಿಫ್ಟ್ ಆಗಿತ್ತು ಎಂಬುದಕ್ಕೆ ಈಗೀಗ ಸಾಕ್ಷಿ ಸಿಗುತ್ತಿದೆ. ಇತ್ತೀಚೆಗೆ ಈದುವಿನ ಸಮೀಪ ನಕ್ಸಲರ ತಂಡ ಕಾಣಿಸಿತ್ತು ಎಂದು ಸುದ್ದಿಯಾಗಿತ್ತಾದರೂ ಆ ನ್ಯೂಸ್‌ಗೆ ಪ್ರಾಮುಖ್ಯತೆ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು ಶಿವಮೊಗ್ಗದ ಗಡಿಯಂಚಿನಲ್ಲಿರುವ ಗ್ರಾಮದಲ್ಲಿ ಶಂಕಿತರು ಕಾಣಿಸಿಕೊಂಡಿದ್ದರು ಎನ್ನಲಾಗಿತ್ತಾದರೂ ಅದು ಬೇರೆಯದ್ದೆ ಆಯಾಮ ಪಡೆದುಕೊಂಡಿತ್ತು. ಇದೀಗ ಚಿಕ್ಕಮಗಳೂರು ಪೊಲೀಸರು ನಕ್ಸಲರ ಚಟುವಟಿಕೆಯನ್ನ ಅಧಿಕೃತಗೊಳಿಸಿದ್ದಾರೆ. ಮೇಲಾಗಿ ನಕ್ಸಲರ ಸಿಂಪತೈಸರ್‌ಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಟ್ಟಾರೆ, ಮಲೆನಾಡು ಮತ್ತೆ ನಕ್ಸಲರ ಹೆಜ್ಜೆಗೆ ಸಾಕ್ಷಿಯಾಗಿದ್ದು ಮುಂದಿನ ಬೆಳವಣಿಗೆಗಳನ್ನ ಕುತೂಹಲದಿಂದ ನೋಡುವಂತೆ ಮಾಡಿದೆ.
ಈ ಬಗ್ಗೆ ಮಲೆನಾಡು ಟುಡೆಯಲ್ಲಿ ಈ ಹಿಂದೆ ಪ್ರಕಟವಾಗಿರುವ ವರದಿ : ಕೇರಳದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮುಂಡಗಾರು ಲತಾ ಸತ್ತಿಲ್ಲವೇ? ಮಂಗಳೂರು ರೈಲು ಮತ್ತು ಸಿಸಿ ಕ್ಯಾಮರಾದ ಸತ್ಯ JP ಬರೆಯುತ್ತಾರೆ!
SUMMARY | Naxals Team led by Mundagaru Latha visited the residence of Subbagowda at Kadegundi village in Chikkamagaluru Koppa taluk. Chikkamagaluru police have registered a case under UAPA act in this regard.
KEYWORDS | | Naxals Team led by Mundagaru Latha, Kadegundi village ,Chikkamagaluru, Koppa taluk. Chikkamagaluru police, case under UAPA act, onitmane