ಎದೆ ಸುಡುವ ದುಗುಡದ ನಡುವೆ ಮಗನ ಕಣ್ಣುಗಳನ್ನು ದಾನ ಕೊಟ್ಟ ದಂಪತಿ!

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 8, 2025 ‌‌ 

ವಿಧಿ ನಿಯಮ ತದ್ವಿರುದ್ದವಾದಾಗ ಆಗುವ ನೋವು ನಿಜಕ್ಕೂ ಸಾವಿರ ಸಾವಿರ ಕಲ್ಲು ಎದೆಗೆ ಬಡಿದಂತಿರುತ್ತದೆ. ಇಂತಹ ನೋವಿನ ನಡುವೆ, ತಮ್ಮ ಕುಟುಂಬದ ದುಃಖವನ್ನು ಮುಚ್ಚಿಟ್ಟು ಪೋಷಕರೊಬ್ಬರು ತಮ್ಮ ಮಗನ ಕಣ್ಣುಗಳನ್ನು ಇನ್ನೊಬ್ಬರ ಬಾಳಿಗೆ ಬದುಕಾಗಲೆಂದು ದಾನ ಮಾಡಿದ್ದಾರೆ. 

ಹೊಸನಗರ ತಾಲ್ಲೂಕು ಕೋಟೆತಾರಿಗದ ಮೋಹನ್  ಹಾಗೂ ಸುನಿತಾ ದಂಪತಿ ದುಃಖದ ನಡುವೆಯು ಇಂತಹದ್ದೊಂದು ನಿರ್ಣಯ ಕೈಗೊಂಡು ತಮ್ಮ ಮಗನ ಕಣ್ಣುಗಳು ಇನ್ನೊಬ್ಬರ ಬದುಕ ಬೆಳಕ ನೋಡುವುದಕ್ಕಾಗಿ ನೀಡಿದ್ದಾರೆ. 

ಇಲ್ಲಿನ ಮೋಹನ್​ ಸುನಿತಾ ದಂಪತಿಗೆ ಶಮಿತ್ ಎಂಬ ಮಗನಿದ್ದ . ಆತನಿಗೆ 18 ವರ್ಷವಾಗಿತ್ತು. ಆದರೆ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶಮಿತ್ ನಿನ್ನೆ ಸಾವನ್ನಪ್ಪಿದ್ದ. 

ಈ ಹಿನ್ನೆಲೆಯಲ್ಲಿ ಆತ ಕಣ್ಣುಗಳನ್ನು ಶಂಕರ್ ಕಣ್ಣಿನ ಆಸ್ಪತ್ರೆಗೆ ಪೋಷಕರು ದಾನ ಮಾಡಿದ್ದಾರೆ. 

Share This Article