SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024
ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿನ ಸೆಕೆಂಡ್ಮೇನ್ನಲ್ಲಿ ಇವತ್ತು ಬೆಳಗ್ಗೆ ಬೆಳಗ್ಗೆ ಮಹಿಳೆಯೊಬ್ಬಳ ಕೊಲೆ ನಡೆದಿದೆ. ಮೂಲತಃ ಸಾಗರದ ಆನಂದಪುರದ ನಿವಾಸಿಯಾಗಿರುವ ರುಕ್ಸಾನಾ ಎಂಬಾಕೆಯನ್ನು ಆಕೆಯ ಗಂಡ ಯೂಸುಫ್ ಕೊಲೆ ಮಾಡಿದ್ದಾನೆ. ಕುಡುಗೋಲು ಹಾಗೂ ಚಾಕು ಸೇರಿದಂತೆ ವಿವಿಧ ಆಯುದಗಳಿಂದ ಹಲ್ಲೆ ಮಾಡಿ ಯೂಸುಫ್ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಬಗ್ಗೆ ಎಸ್ಪಿಯವರು ಮಾಹಿತಿ ನೀಡಿದ್ದು, ಪ್ರಕರಣದ ಸಂಬಂಧ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನಡೆದಿದ್ದೇನು?
ಕಳೆದ ಒಂದು ವಾರದ ಹಿಂದೆ ಯೂಸುಫ್ ಹಾಗೂ ರುಕ್ಸಾನಾ ನಡುವೆ ಜಗಳವಾಗಿತ್ತು. ಇದೇ ಕಾರಣಕ್ಕೆ ಆಕೆ ಸಾಗರದ ಆನಂದಪುರದಲ್ಲಿರುವ ತನ್ನ ತವರುಮನೆಗೆ ಹೋಗಿದ್ದಳು. ಈ ನಡುವೆ ನಿನ್ನೆದಿನ ಯೂಸುಫ್ ಮಗಳಿಗೆ ಹುಷಾರ್ ಇಲ್ಲ ಎಂದು ಹೇಳಿ ತನ್ನ ಪತ್ನಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದ. ಆದರೆ ಜಗಳದ ಹಿನ್ನೆಲೆಯಲ್ಲಿ ರುಕ್ಸಾನಾ ಮತ್ತವರ ಪೋಷಕರು ನೇರವಾಗಿ ಮಗಳನ್ನು ಅಡ್ಮಿಟ್ ಮಾಡಿರುವ ಆಸ್ಪತ್ರೆಗೆ ಬರುವುದಾಗಿ ಹೇಳುತ್ತಾರೆ. ಇದಕ್ಕೆ ಯೂಸುಫ್, ಮಗಳನ್ನ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದೇನೆ ಹಾಗಾಗಿ ಅಣ್ಣನ ಮನೆಗೆ ಬರುವಂತೆ ತಿಳಿಸಿದ್ದ. ಆತನ ಮಾತಿನಂತೆ ರುಕ್ಸಾನಾ ಹಾಗೂ ಅವಳ ಪೋಷಕರು ಯೂಸುಫ್ನ ಅಣ್ಣನ ಮನೆಗೆ ನಿನ್ನೆ ಬಂದಿದ್ದರು. ಇವತ್ತು ಬೆಳಗ್ಗೆ ರುಕ್ಸಾನಾ ಜೊತೆ ಪರ್ಸನಲ್ ಆಗಿ ಮಾತನಾಡಬೇಕು ಎಂದು ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿಗೆ ತೆರಳಿದ 15 ನಿಮಿಷದಲ್ಲಿ ಆಕೆಯ ಜೊತೆಗೆ ಜಗಳ ತೆಗೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನುತ್ತದೆ ಪೊಲೀಸ್ ಮೂಲ.
ಯೂಸುಫ್ನ ಸಹೋದರ ಹೇಳಿದ್ದೇನು?
ಯೂಸುಫ್ನ ಸಹೋದರ ಇಸ್ಮಾಯಿಲ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ರುಕ್ಸಾನ ತವರು ಮನೆಗೆ ಹೋಗಿದ್ದಳು. ಇವತ್ತು ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋದ ಯೂಸುಫ್ ಅವಳನ್ನ ಕೊಲೆ ಮಾಡಿದ್ದಾನೆ. ಇದಕ್ಕೆ ಆಕೆ ಇನ್ನೊಬ್ಬರ ಜೊತೆ ಸಂಬಂಧ ಇದೆ ಎಂಬ ಅನುಮಾನ ಕಾರಣ ಎಂಬುದು ಇಸ್ಮಾಯಿಲ್ರವರ ಆರೋಪ.
ರುಕ್ಸಾನಳಿಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನ ಹೊಂದಿದ್ದ ಯೂಸುಫ್ ಅದಕ್ಕೆ ಸಂಬಂಧಿಸಿದಂತೆ ಮೊಬೈಲ್ ಕರೆಗಳ ಸಾಕ್ಷ್ಯ ತೋರಿಸಿ ಜಗಳವಾಡಿದ್ದ. ಇದೇ ಕಾರಣಕ್ಕೆ ಆಕೆಯನ್ನ ತವರಿಗೆ ಕಳುಹಿಸಿದ್ದ ಯೂಸುಫ್ ಇವತ್ತು ತನ್ನ ಮನೆಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾನೆ. ಬಳಿಕ ರುಕ್ಸಾನಾರ ಸಂಬಂಧಿಕರಿಗೆ ತಿಳಿಸಿದ್ದರಿಂದ ಘಟನೆ ಬಯಲಿಗೆ ಬಂದಿದೆ ಎನ್ನುತ್ತಾರೆ ಇಸ್ಮಾಯುಲ್.
ಸ್ಥಳೀಯರು ಹೇಳೋದೇನು?
ಸ್ಥಳೀಯರು ರುಕ್ಸಾನಾ ಒಳ್ಳೆಯ ಗೃಹಿಣಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಕುಟುಂಬಸ್ಥರಲ್ಲಿಯು ರುಕ್ಸಾನಾ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಜಗಳದ ವಿಚಾರದಲ್ಲಿ ಮಾತುಕತೆಗಳು ನಡೆದಿದ್ದವು ಎನ್ನಲಾಗುತ್ತೆ. ರುಕ್ಸಾನಾ ಸಂಬಂಧಿಕರು ಸಹ ಯೂಸುಫ್ ಕಡೆಯವರ ಆರೋಪವನ್ನು ಅಲ್ಲಗಳೆದಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಯೂಸುಫ್ನನ್ನ ವಶಕ್ಕೆ ಪಡೆದು, ಪ್ರಕರಣದ ಕಾನೂನು ಪ್ರಕ್ರಿಯೆಗಳನ್ನ ನಡೆಸ್ತಿದ್ದಾರೆ. ಅಲ್ಲದೆ ಇಡೀ ಪ್ರಕರಣವನ್ನು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸ್ತಿದ್ದಾರೆ. ಒಟ್ಟಾರೆ 38 ವರ್ಷದ ರುಕ್ಸಾನ ಹಾಗೂ ಯೂಸುಫ್ನ ನಡುವೆ ಮೂಡಿದ ಸಂಶಯದಿಂದಾಗಿ ರುಕ್ಸಾನ ಸಾವನ್ನಪ್ಪಿದ್ದಾಳೆ. ಎಸಿ ಮೆಕಾನಿಕ್ ಆಗಿ ಇಲ್ಲಿವರೆಗೂ ಸುಂದರ ಸಂಸಾರ ನಡೆಸಿದ್ದ ಯೂಸುಫ್ ಪೊಲೀಸ್ ವಶದಲ್ಲಿದ್ದಾನೆ. ಇವರ ನಡುವೆ ಭವಿಷ್ಯ ಕಟ್ಟಿಕೊಳ್ಳಬೇಕಾಗಿದ್ದ ಮಕ್ಕಳು ಮಾತ್ರ ಈಗ ಆಗಿದ್ದು ಅತಂತ್ರ.
SUMMARY | husband murdered his wife , Wadi A Huda area, Tunganagar police station ,Shivamogga.
KEY WORDS | husband murdered his wife , Wadi A Huda area, Tunganagar police station ,Shivamogga.