ಅಲರ್ಟ್‌ ಶಿವಮೊಗ್ಗ | ಫೆಬ್ರವರಿ 26 ಕ್ಕೆ ಸಿಟಿಯಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧ!

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 21, 2025 ‌‌ 

ಶಿವಮೊಗ್ಗ ನಗರದಲ್ಲಿ ಇದೇ ಫೆಬ್ರವರಿ 26 ರಂದು ಮಾಂಸ ಮಾರಾಟಕ್ಕೆ ನಿರ್ಬಂಧ ಹೇರಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯನ್ನು ನೀಡಿದ್ದಾರೆ. 

ಫೆಬ್ರವರಿ 26 ರಂದು ಮಾಂಸ ಮಾರಾಟ ನಿಷೇಧ

ಫೆಬ್ರವರಿ 26 ರಂದು ಮಹಾಶಿವರಾತ್ರಿ ಹಬ್ಬವಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಪ್ರಯುಕ್ತ ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. 

ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಅಂದಿನ ಒಂದು ದಿನ ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

ಈ ವರ್ಷ ಯಾವಾಗೆಲ್ಲಾ ಮಾಂಸ ಮಾರಾಟಕ್ಕೆ ನಿಷೇಧವಿದೆ?!

  • ಏಪ್ರಿಲ್‌ 6 ರಂದು ಶ್ರೀರಾಮ ನವಮಿ 

  • ಏಪ್ರಿಲ್‌10 ಮಹಾವೀರ ಜಯಂತಿ

  • ಮೇ 12 ಬುದ್ಧ ಪೂರ್ಣಿಮೆ

  • ಆಗಸ್ಟ್‌ 16 ಕೃಷ್ಣ ಜನ್ಮಾಷ್ಟಮಿ 

  • ಆಗಸ್ಟ್‌ 27 ಗಣೇಶ ಚತುರ್ಥಿ 

  • ಅಕ್ಟೋಬರ್‌ 2 ಗಾಂಧಿ ಜಯಂತಿ ದಿನ 

  • ನವೆಂಬರ್‌ 25  ಸೇಂಟ್ ಟಿ.ಎಲ್. ವಾಸ್ವಾನಿ ಜನ್ಮದಿನ 

ಈ ದಿನಗಳಂದು ಶಿವಮೊಗ್ಗ ನಗರದಲ್ಲಿ ಮಾಂಸ ಮಾರಾಟಕ್ಕೆ ನಿಷೇಧವಿದ್ದು ಕಾನೂನು ಉಲ್ಲಂಘಿಸಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡಿದ ಪಕ್ಷದಲ್ಲಿ ಅಂತಹವರ ವಿರುದ್ಧ ಕಾನೂನಾತ್ಮಕ ಸಂಸ್ಥೆಗಳು ಕಾನೂನು ಕ್ರಮ ಕೈಗೊಳ್ಳುತ್ತದೆ. 

SUMMARY | meat sale ban in shivamogga 

KEY WORDS |  meat sale ban in shivamogga 

Share This Article