ಬಿಜೆಪಿಯವರ ಎಲೆಯಲ್ಲಿ ಹೊಲಸು ಬಿದ್ದಿದ್ದರೂ ಅವರು ನೋಡುವುದಿಲ್ಲ | ಆರ್‌ ಪ್ರಸನ್ನ ಕುಮಾರ್‌ ಹೀಗಂದಿದ್ಯಾಕೆ

ಹಂಚಿಕೊಳ್ಳಿ
WhatsApp Facebook X Telegram
ಬಿಜೆಪಿಯವರ ಎಲೆಯಲ್ಲಿ ಹೊಲಸು ಬಿದ್ದಿದ್ದರೂ ಅವರು ನೋಡುವುದಿಲ್ಲ | ಆರ್‌ ಪ್ರಸನ್ನ ಕುಮಾರ್‌ ಹೀಗಂದಿದ್ಯಾಕೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 21, 2025

ಶಿವಮೊಗ್ಗ | ಮುಡಾ ಹಗರಣದಲ್ಲಿ ಸಿ ಎಂ ಸಿದ್ದರಾಮಯ್ಯರವರಿಗೆ ಕೋರ್ಟ್‌ ಕ್ಲೀನ್‌ ಚಿಟ್‌ ಕೊಟ್ಟ ವಿಚಾರದ ಬಗ್ಗೆ ಬಿಜೆಪಿಯವರು ವಿರೋದ ಮಾಡುತ್ತಿದ್ದಾರೆ. ಆದರೆ ಬಿಜೆಪಿಯವರು ಬೇರೆಯವರ ಎಲೆಯಲ್ಲಿ ನೊಣ ಬಿದ್ದಿದ್ದನ್ನು ಹೇಳುತ್ತಾರೆ. ಅವರ ಎಲೆಯಲ್ಲಿ ಹೊಲಸು ಬಿಡಿದ್ದರೂ ನೋಡುವುದಿಲ್ಲ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ  ಆರ್‌ ಪ್ರಸನ್ನ ಕುಮಾರ್‌ ವ್ಯಂಗ್ಯವಾಡಿದರು.

ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಜಿಲ್ಲಾಧ್ಯಕ್ಷರು ಈ ಮೇಲಿನಂತೆ ಉತ್ತರಿಸಿದರು. ಬಿಜೆಪಿಯವರು ಯಾವಾಗಲೂ ಮುಡಾ ಹಗರಣದ ಬಗ್ಗೆ ವಿರೋಧ ಮಾಡುತ್ತಲೇ ಇರುತ್ತಾರೆ. ಅವರು ಇರುವದೇ ವಿರೋಧ ಮಾಡಲೆಂದು. ಸಿಎಂ ಸಿದ್ದರಾಮಯ್ಯರವರು  2 ಬಾರಿ ರಾಜ್ಯದ  ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಅವರು ಮನಸ್ಸು ಮಾಡಿದ್ದರೆ ಇಂತಹ ಸಾವಿರಾರು ಸೈಟ್‌ಗಳನ್ನು ಅಕ್ರಮ ಮಾಡಬಹುದಿತ್ತು. ಆದರೆ ಅವರು ಸೈಟ್‌ಗಳನ್ನು ಸಹ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಬಿಜೆಪಿಯವರು ಬೇರೆಯವರ ಎಲೆಯಲ್ಲಿ ನೊಣ ಬಿದ್ದಿದ್ದು ಹೇಳುತ್ತಾರೆ. ಅವರ ಎಲೆಯಲ್ಲಿ ಹೊಲಸು ಬಿದ್ದಿದ್ದರೂ ನೋಡುವುದಿಲ್ಲ ಎಂದು ಕಿಡಿಕಾರಿದರು. 

SUMMARY | The BJP says that a fly has fallen on someone else’s leaf. Congress district president R Prasanna Kumar said that even if there is dirt left in his leaf, he will not see it.

KEYWORDS | BJP, R Prasanna Kumar,  district president, Congress,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor