ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾಗಿ ಸಿ.ಜಿ.ಮಧುಸೂದನ್ ಇಂದು ಅಧಿಕಾರ ಸ್ವೀಕಾರ

ಹಂಚಿಕೊಳ್ಳಿ
WhatsApp Facebook X Telegram
Madhusudan CG Takes Charge as SUDA Chairman in Shivamogga
Madhusudan CG Takes Charge as SUDA Chairman in ShivamoggaMadhusudan CG Takes Charge as SUDA Chairman in Shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕಗೊಂಡಿರುವ ಮಧು ಇವತ್ತು ಶನಿವಾರ ಅಧಿಕೃತವಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ. ಈ ಮೂಲಕ ಶಿವಮೊಗ್ಗ ಮತ್ತು ಭದ್ರಾವತಿ ಅವಳಿ ನಗರಗಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಸಾರಥಿ ಲಭಿಸಿದಂತಾಗಿದೆ.

ಎನ್​ಎಸ್​ಯುಐ ಮಧು ಎಂದೇ ಕರೆಸಿಕೊಳ್ಳುವ ಸಿ.ಜಿ.ಮಧುಸೂದನ್ , ವಿದ್ಯಾರ್ಥಿ ಹೋರಾಟದಿಂದಲೇ ಗಮನಸೆಳೆದ ವ್ಯಕ್ತಿ. ಇಡೀ ರಾಷ್ಟ್ರದಲ್ಲಿಯೇ ಶಿವಮೊಗ್ಗದ ಎನ್​ಎಸ್​ಯುಐ ಸಂಘಟನೆಯನ್ನ ಗುರುತಿಸುವ ರೀತಿಯಲ್ಲಿ ಕೆಲಸ ಮಾಡಿದ್ದ ಮಧುಗೆ, ಪಕ್ಷ ಸಂಘಟನೆಯಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಯುವ ಕಾಂಗ್ರೆಸ್‌ನಲ್ಲಿಯೂ ಗುರುತಿಸಿಕೊಂಡು ಪಕ್ಷದ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸಿದ್ದ ಮಧು ಕೆಲಸಕ್ಕೆ ಇದೀಗ ಪಕ್ಷ ತಕ್ಕ ಹುದ್ದೆಯನ್ನ ನೀಡಿದೆ.

ಭಾರತ್ ಜೋಡೋ ಯಾತ್ರೆ 2.0

ಈ ನಿಟ್ಟಿನಲ್ಲಿ ಅವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇವತ್ತು ಬೆಳಗ್ಗೆ ಕಾರ್ಯಕ್ರಮ ಇದ್ದು, ಮಧು ಅಭಿಮಾನಿಗಳು ವಿಜ್ರಂಭಣೆಯಿಂದ ಅವರನ್ನ ಬರಮಾಡಿಕೊಳ್ಳಲಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor