SHIVAMOGGA | MALENADUTODAY NEWS | ಮಲೆನಾಡು ಟುಡೆ Dec 10, 2024
ಮಲೆನಾಡಲ್ಲಿ ಮಾತ್ರ ವಿಶೇಷವಾಗಿ ಕಾಣಿಸುವಂತಹ ಹಪ್ಪಟ್ಟೆ ಹಾವೊಂದು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕು ನಲ್ಲಿ ಕಾಣ ಸಿಕ್ಕಿದೆ.ಈ ತಲೆಮಾರಿಗೆ ಅಪರೂಪವಾಗಿ ಈ ಹಾವಿನ ಸಂತತಿ ಉರಗ ಬಳಗದ ವಿಷಕಾರಿ ಹಾವಾಗಿದೆ. ಮಲ್ನಾಡ್ ಮಂದಿ ಇದನ್ನ ಹಪ್ಟಟೆ ಹಾವು, ರಕ್ತಗನ್ನಡಿ ಹಾವು, ಹವಳದ ಹಾವು ಎಂದು ಕರೆಯುತ್ತಾರೆ. ಇದು ಕಚ್ಚಿದರೇ ವಿಷವೇರಿ ಮನುಷ್ಯ ಸಾಯುವುದಿಲ್ಲವಾದರೂ, ಚಿತ್ರವಿಚಿತ್ರ ಸಮಸ್ಯೆಗೀಡಾಗುತ್ತಾನೆ. ಈ ಹಾವು ಕಚ್ಚಿದರೆ, ತಕ್ಕುದಾದ ಮದ್ದು ಕೂಡ ಇಲ್ಲ. ಹೀಗಾಗಿ, ಕ್ರಮೇಣ ಸಾವು ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಹಿರಿಯರು.
ಈಗೀಗ ಈ ಹಾವು ಕಾಣಿಸುವುದು ತೀರಾ ಅಪರೂಪ. ನಿನ್ನೆ ದಿನ ಕಳಸದ ಕಲ್ಮಕ್ಕಿಯಲ್ಲಿ ರಿಜ್ವಾನ್ ಎಂಬವರ ಮನೆ ಮುಂದೆ ಕಾಣಿಸಿದೆ. ಅದನ್ನ ಸುರಕ್ಷಿತವಾಗಿ ಹಿಡಿದ ಅವರು, ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ದಾರೆ. ಇನ್ನೂ ಈ ಹಾವು ಮೇಲೆ ಕಪ್ಪು ಬಣ್ಣ ಕಂಡರೆ, ತಳಭಾಗದಲ್ಲಿ ಕೆಂಪು ಬಣ್ಣದಿಂದ ಕಾಣುತ್ತದೆ.
SUMMARY | The coral snake was found at Kalmakki in Kalasa taluk of Chikkamagaluru district
KEY WORDS | coral snake ,Kalmakki , Kalasa taluk , Chikkamagaluru district