ಅಡವಿಟ್ಟ ಬೈಕ್‌ಗಳ ಗೌಡೌನ್‌ , ಚೆಕ್‌, ಆರ್‌ಸಿ, ಅಗ್ರಿಮೆಂಟ್‌ಗಳ ರಾಶಿ | ಶಿವಮೊಗ್ಗ ಬಡ್ಡಿ ಮೀಟರ್‌ ನಿಲ್ಲಿಸಿದ್ರಾ ಪೊಲೀಸ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 12, 2025 ‌‌ 

ಎಲ್ಲೆಲ್ಲೋ ಕೇಳುತ್ತಿದ್ದ ಮೈಕ್ರೋ ಪೈನಾನ್ಸ್‌ ಕಿರುಕುಳದ ವಿಚಾರದ ನಡುವೆ ಶಿವಮೊಗ್ಗದ ಬಡ್ಡಿ ವ್ಯಾಪಾರದ ದೊಡ್ಡ ಕುಳಗಳ ಮೇಲೆ ಶಿವಮೊಗ್ಗ ಪೊಲೀಸರು ಕೊನೆಗೂ ರೇಡ್‌ ಮಾಡಿ, ವಿಚಾರಣೆ ಆರಂಭಿಸಿದ್ದಾರೆ. 

Malenadu Today

 

ಈ ಪೈಕಿ ಯಾವುದೇ ಲೈಸೆನ್ಸ್‌ ಇಲ್ಲದೇ ಗೋಪಿಶೆಟ್ಟಿ ಕೊಪ್ಪದಲ್ಲಿ ವ್ಯಕ್ತಿಯೊಬ್ಬ ಅಡವಿಟ್ಟ ಬೈಕ್‌ಗಳನ್ನು ಇರಿಸಲು ತನ್ನದೆ ದೊಡ್ಡ ಶೆಡ್‌ ನಿರ್ಮಿಸಿಕೊಂಡಿದ್ದ. ದಿಲ್‌ದಾರ್‌ ಆಗಿ ಬಡ್ಡಿ ದಂಧೆ ನಡೆಸ್ತಿದ್ದ ಈತನ ಮನೆ ಮೇಲೆ ತುಂಗಾನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಗುರುರಾಜ್‌ ಲೀಡ್‌ ಮಾಡುತ್ತಿದ್ದ ಟೀಂ ರೇಡ್‌ ಮಾಡಿದೆ. 

Malenadu Today

 

ಆರೋಪಿತ ವ್ಯಕ್ತಿ ಐಶರಾಮಿ ಮನೆಯನ್ನ ಕಟ್ಟಿದ್ದು, ಅದರ ಗೃಹಪ್ರವೇಶ ನಡೆಸಿದ್ದ. ಹಿಂದಿನ ದಿನ ಮನೆ ಒಕ್ಕಲು ನಡೆದಿದ್ದರೇ,  ಮರುದಿನ ಬೆಳಗ್ಗೆ ಪೊಲೀಸರು ಗೃಹಪ್ರವೇಶ ಮಾಡಿ, ಬಡ್ಡಿ ದಂಧೆಯ ತಿಜೋರಿಗೆ ಕೈ ಹಾಕಿದ್ದಾರೆ. ಈತನಿಂದ ಜಪ್ತು ಮಾಡಲಾಗಿರುವ ವಸ್ತುಗಳೇ ಈತ ಎಷ್ಟರಮಟ್ಟಿಗೆ ಬಡ್ಡಿ ವಹಿವಾಟು ನಡೆಸ್ತಿದ್ದ ಎಂಬುದನ್ನು ಹೇಳುತ್ತಿದೆ. ಪೊಲೀಸ್‌ ಮೂಲಗಳ ಪ್ರಕಾರ, ಬ್ರೋಕರ್‌ ಎಂದು ತನ್ನನ್ನು ಗುರುತಿಸಿಕೊಂಡಿರುವ ಈತ, ಸಾಲಗಾರರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈತನಿಂದ ಸಾಲ ಪಡೆದವರೇ, ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಇದನ್ನ ಆಧರಿಸಿ ಪೊಲೀಸರು ರೇಡ್‌ ನಡೆಸಿದ್ದಾರೆ. 

 

ಇನ್ನು ಈತನಷ್ಟೆ ಅಲ್ಲದೆ ಶಿವಮೊಗ್ಗದಲ್ಲಿ , ಬಡ್ಡಿ ದಂಧೆಯನ್ನು ವಿತ್‌ಔಟ್‌ ಲೈಸೆನ್ಸ್‌ ನಡೆಸ್ತಿದ್ದ 11 ಕಡೆಗಳಲ್ಲಿ ವಿವಿಧ ಠಾಣೆಯ ಪೊಲೀಸರು ರೇಡ್‌ ಮಾಡಿದ್ದಾರೆ.  ಶಿವಮೊಗ್ಗದ ಮಾರ್ನಬೈಲು, ಅಣ್ಣಾನಗರ, ಕಾಮಾಕ್ಷಿ ಬೀದಿ, ವಿದ್ಯಾನಗರ, ಕಾಶೀಪುರ, ಕೋಟೆ ಗಂಗೂರು, ಬಸವನಗುಡಿ, ಗೋಪಿಶೆಟ್ಟಿಕೊಪ್ಪ, ಚಾಲುಕ್ಯ ನಗರ, ಗುರುಪುರ ಹಾಗೂ ಇಂದಿರಾ ಬಡಾವಣೆಗಳಲ್ಲಿ ರೇಡ್‌ ಮಾಡಲಾಗಿದ್ದು ಒಟ್ಟು 9 ಕೇಸ್‌ ದಾಖಲಾಗಿದೆ. ಈ ವೇಳೆ ಬರೋಬ್ಬರಿ  ₹ 39 ಲಕ್ಷ ನಗದು, 24 ಮೊಬೈಲ್ ಫೋನ್‌, ಒಂದು ಲ್ಯಾಪ್ ಟಾಪ್, 72 ಚೆಕ್, 19 ವಾಹನಗಳ ಆರ್‌.ಸಿ ಬುಕ್, ಏಳು ವೆಹಿಕಲ್ ಬಾಂಡ್, ಅಗ್ರಿಮೆಂಟ್ ಕಾಪಿ, ಬ್ಯಾಂಕ್‌ ಪಾಸ್ ಬುಕ್, ಸೇಲ್ ಡೀಡ್,  29 ಬೈಕ್‌ಗಳು ಮತ್ತು ಎರಡು ಕಾರುಗಳನ್ನು ಜಪ್ತು ಮಾಡಿದ್ದಾರೆ.

 

SUMMARY  |  Shivamogga police conduct raids on moneylenders, seize cash and documents

 

KEY WORDS | Shivamogga police conduct raids on moneylenders 

Share This Article