ಹಂದಿ ಅಣ್ಣಿ ಕೊಲೆ ಕೇಸ್‌ ಆರೋಪಿಗಳು ಕೋರ್ಟ್‌ಗೆ ಹಾಜರು |ಡ್ರೋನ್‌ ಕಾವಲಿನ ಜತೆ ಹೈಸೆಕ್ಯುರಿಟಿ ನೀಡಿದ ಪೊಲೀಸ್‌! ಏತಕ್ಕೆ ಗೊತ್ತಾ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 21, 2025 ‌‌ 

ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳು ವಿಚಾರಣೆ ಹಿನ್ನೆಲೆಯಲ್ಲಿ ಇವತ್ತು ಶಿವಮೊಗ್ಗ ಕೋರ್ಟ್‌ಗೆ ಹಾಜರಾಗಿದ್ದಾರೆ. ಈ ವೇಳೆ ಅವರ ಮೇಲೆ ಅಟ್ಯಾಕ್‌ ಮಾಡುವ ಸಾದ್ಯತೆ ಇದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಆರೋಪಿಗಳಿಗೆ ಬಿಗಿ ಬಂದೋಬಸ್ತ್‌ ಒದಗಿಸಿದ್ದರು. ಕೋರ್ಟ್‌ ಆವರಣ ಸುತ್ತಮುತ್ತ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದಷ್ಟೆ ಅಲ್ಲದೆ ಡ್ರೋನ್‌ ಮೂಲಕ ಕಣ್ಗಾವಲಿಡಲಾಗಿತ್ತು. 

- Advertisement -

Malenadu Today

2022 ಜುಲೈ 14 ವಿನೋಬನಗರ ಪೊಲೀಸ್‌ ಠಾಣೆಯ ಸಮೀಪವೇ ರೌಡಿಶೀಟರ್‌ ಹಂದಿ ಅಣ್ಣಿಯನ್ನು ಮರ್ಡರ್‌ ಮಾಡಲಾಗಿತ್ತು. ಪ್ರಕರಣದಲ್ಲಿ (1) ಕಾರ್ತಿಕ್ @ ಕಾಡಾ ಕಾರ್ತಿಕ್ ಎ-1 (2) ನಿತಿನ್ @ ಭಜರಂಗಿ ಎ-2 (3) ಮದನ್ ರಾಜ್ @ ಮದನ್ ರಾಯ್‌ ಎ-3,  (4) ಚಂದನ್ @ ಚಾರ್ಲಿ ಎ-4  (5) ಫಾರೂಕ್ @ ಉಮ್ಮರ್ ಎ-5 (6) ಮಧುಸೂದನ್‌ ಅಲಿಯಾಸ್‌ ಕರಿಯಾ ಎ-6 (7) ಮಧು ಎ-7  (8) ಆಂಜನೇಯ ಕೆ ಎಸ್‌ ಎ-(8) ಆರೋಪಿಗಳು.

Malenadu Today 

ಈ ಪೈಕಿ ಆಂಜನೇಯ ಮೃತಪಟ್ಟಿದ್ದು, ಕಾಡಾ ಕಾರ್ತಿ ಮತ್ತು ನಿತಿನ್‌ ಜೈಲಿನಲ್ಲಿದ್ದಾರೆ. ಉಳಿದ ಐವರು ಆರೋಪಿಗಳಾದ ಮಧು, ಮಧುಸೂಧನ್, ಮದನ್ ರಾಯ್, ಫಾರೂಖ್, ಚಂದನ್‌ ಜಾಮೀನಿನ ಮೇಲೆ ರಿಲೀಸ್‌ ಆಗಿದ್ದು ಇವತ್ತು ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಹಂದಿ ಅಣ್ಣಿ ಕೊಲೆ ಪ್ರಕರಣ ಪ್ರಮುಖ ಘಟ್ಟ ತಲುಪಿದ್ದು ಕೇಸ್‌ನ ಎವಿಡೆನ್ಸ್‌ ನಡೆಯುತ್ತಿದೆ.

Malenadu Today

 ಈ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರರ ಸಾಕ್ಷಿ ನುಡಿಯುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ಹಾಜರಾತಿ ಅತಿಮುಖ್ಯವಾದ್ದರಿಂದ ಅವರುಗಳು ಕೋರ್ಟ್‌ಗೆ ಬಂದಿದ್ದರು. 

Malenadu Today

ಈ ಹಿಂದೆ ಮಧು ಮತ್ತು ಆಂಜನೇಯ ಶಿವಮೊಗ್ಗ ಕೋರ್ಟ್‌ಗೆ ಹಾಜರಾಗಿ ವಾಪಸ್‌ ತಮ್ಮ ಊರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ನ್ಯಾಮತಿ ಬಳಿಯಲ್ಲಿ ಅವರ ಮೇಲೆ ಆಪೋಸಿಟ್‌ ಗ್ಯಾಂಗ್‌ ಅಟ್ಯಾಕ್‌ ಮಾಡಿತ್ತು. 

Malenadu Today

2023 ರ ಮಾರ್ಚ್‌ 15 ರಂದು ನಡೆದಿದ್ದ ಘಟನೆಯಲ್ಲಿ ಆಂಜನೇಯ ಸ್ಪಾಟ್‌ನಲ್ಲಿಯೇ ಸಾವನ್ನಪ್ಪಿದ್ದ ಮಧು ಹಾಗೂ ಹೀಗೂ ಬಚಾವ್‌ ಆಗಿದ್ದ. ಈ ಪ್ರಕರಣದಲ್ಲಿ ತಮಿಳ್‌ ಸುನೀಲ್‌ ಸೇರಿ ಹಲವರು ಅರೆಸ್ಟ್‌ ಆಗಿದ್ದರು. ʼ

Malenadu Today

ಅಂದು ಕೋರ್ಟ್‌ಗೆ ವಿಚಾರಣೆಗೆ ಹಾಜರಾದಾಗಿನಿಂದ ಆರೋಪಿಗಳನ್ನು ಫಾಲೋ ಮಾಡಿದ್ದ ಆಫೋಸಿಟ್‌ ಗ್ಯಾಂಗ್‌ ದಾವಣಗೆರೆಯಲ್ಲಿ ಅವರ ಮೇಲೆ ಅಟ್ಯಾಕ್‌ ಮಾಡಿತ್ತು. ಇದು ಕೋರ್ಟ್‌ಗೆ ಹಾಜರಾಗುವ ಆರೋಪಿಗಳನ್ನು ಫೀಲ್ಡ್‌ ಮಾಡುತ್ತಿದ್ದ ಅನುಮಾನವನ್ನು ಪುಷ್ಟಿಕರಿಸಿತ್ತಲ್ಲದೆ. 

Malenadu Today

ಶಿವಮೊಗ್ಗದಲ್ಲಿ ರೌಡಿ ಗ್ಯಾಂಗ್‌ ಕೋರ್ಟ್‌ಗೆ ಹಾಜರಾಗುವಾಗಲೇ ತಮ್ಮ ಶತ್ರುಗಳಿಗೆ ಮುಹೂರ್ತ ಫಿಕ್ಸ್‌ ಮಾಡುವ ಐಡಿಯಾವನ್ನು ಬಯಲು ಮಾಡಿತ್ತು. ಏಕೆಂದರೆ ಹಂದಿ ಅಣ್ಣಿಯನ್ನು ಸಹ ಕೋರ್ಟ್‌ಗೆ ಹೋಗುವಾಗಲೇ ಟಾರ್ಗೆಟ್‌ ಮಾಡಿ ಮರ್ಡರ್‌ ಮಾಡಲಾಗಿತ್ತು. ಇದೇ ಕಾರಣಕ್ಕೆ ಆರೋಪಿಗಳಿಗೆ ರಕ್ಷಣೆ ನೀಡುವ ಸಲುವಾಗಿ ಇವತ್ತು ಕೋರ್ಟ್‌ಗೆ ಹಾಜರಾದ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. 

Malenadu Today

ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯ ಜೊತೆ ಐವರು ಆರೋಪಿಗಳಿಗೆ ವಿನೋಬನಗರ ಪೊಲೀಸ್‌ ಠಾಣೆಯ ಪೊಲೀಸರು ಬಂದೋಬಸ್ತ್‌ ನೀಡಿದ್ದು, ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ಅವರನ್ನು ಸುರಕ್ಷಿತವಾಗಿ ಗಡಿದಾಟಿಸಿದ್ದಾರೆ. ಅಲ್ಲದೆ ಡ್ರೋನ್‌ ಕ್ಯಾಮರಾದ ಕಣ್ಗಾವಲು ಹಾಕಿದ್ದರು. 

Malenadu Today

ಶ್‌! ಶಿವಮೊಗ್ಗ ರೌಡಿಸಂನ ಸೈಲೆನ್ಸ್‌ ಬ್ರೇಕ್‌ | ಕೋರ್ಟ್‌ ಡೇಟ್‌ ಮುಹೂರ್ತದ ಸ್ಕೆಚ್‌ ಯಾರಿಗೆ? ಏನಿದು ಮಲೆನಾಡು ಟುಡೆ JP EXCLUSIVE

Malenadu Today

SUMMARY |  handi anni accused attend shivamogga court 

KEY WORDS |  handi anni accused attend shivamogga court , shivamogga court, handi anni murder case

Share This Article
Leave a Comment

Leave a Reply

Your email address will not be published. Required fields are marked *