zee kannada : ಜೀ ಕನ್ನಡ ಸರಿಗಮಪ ಡ್ರಾಮ ಜೂನಿಯರ್ಸ್ ಸೇರಿದಂತೆ ಇನ್ನಿತರೆ ರಿಯಾಲಿಟಿ ಶೋಗಳನ್ನು ನಡೆಸುವ ಮೂಲಕ ಎಷ್ಟೂ ಜನ ಕಲಾವಿದರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ. ಅಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಎಷ್ಟೋ ಪ್ರತಿಭೆಗಳು ಉತ್ತಮ ಕಲಾವಿದರು ಹಾಗೂ ಗಾಯಕರಾಗಿ ದೇಶ ವಿದೇಶದಾದ್ಯಂತ ಖ್ಯಾತಿಯನ್ನು ಗಳಿಸಿದ್ದಾರೆ. ಅದೇ ರೀತಿ ಜೀ ಕನ್ನಡ ಕಳೆದ ವರ್ಷದಿಂದ ಮಹಾ ನಟಿ ಎಂಬ ರಿಯಾಲಿಟಿ ಶೋ ಒಂದನ್ನು ನಡೆಸುತ್ತಿದ್ದು ಮಹಾನಟಿ ಸೀಸನ್ 1 ಈಗಾಗಲೇ ಯಶಸ್ವಿಯಾಗಿದೆ. ಈಗ ಸಿಜನ್ 2ಗೆ ತಯಾರಿ ನಡೆಯುತ್ತಿದ್ದು, ಮಹಾನಟಿ ಸೀಜನ್ 02 ನ ಆಡಿಷನ್ ಶಿವಮೊಗ್ಗದಲ್ಲಿ ಏಪ್ರಿಲ್ 27 ರಂದು ನಡೆಯುತ್ತಿದೆ
ಏಪ್ರಿಲ್ 27 ರ ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗದ ಬಸವೇಶ್ವರ ವಿದ್ಯಾಸಂಸ್ಥೆ.ತಾಲೂಕು ಕಛೇರಿ ರಸ್ತೆ.ಕಾರ್ಪೋರೇಶನ್ ಹತ್ತಿರ ಆಡಿಷನ್ ಆರಂಭವಾಗಲಿದೆ. ಈ ಆಡಿಷನ್ಗೆ 18 ರಿಂದ 28 ವರ್ಷದೊಳಗಿನ ಯುವತಿಯರು ಭಾಗವಹಿಸಬಹುದು. ಹಾಗೆಯೇ ಆಡಿಷನ್ಗೆ ಭಾಗವಹಿಸಲು ಇಚ್ಚಿಸುವ ಯುವತಿಯರು 2 ನಿಮಿಷದ 2 ಬೇರೆ ಬೇರೆ ರೀತಿಯ ನಟನೆಯ ತುಣುಕನ್ನು ಅಭ್ಯಾಸಮಾಡಿಕೊಂಡು ಬಂದು ಆಡಿಷನ್ನಲ್ಲಿ ನಟಿಸಬೇಕು. ಹಾಗೆಯೇ ಪಾಸ್ಪೋರ್ಟ್ ಸೈಜ್ ಪೋಟೋ ಹಾಗೂ ಯಾವುದಾದರು ಅಡ್ರೆಸ್ ಪ್ರೋಪ್ ದಾಖಲೆಗಳನ್ನು ತರಬೇಕು.
zee kannada: ಆಡಿಷನ್ಗೆ ಯಾವುದೇ ಶುಲ್ಕವಿಲ್ಲ
ಜೀ ಕನ್ನಡ ಈ ಆಡಿಷನ್ಗೆ ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ. ಹಾಗೇನಾದರೂ ಮಾಹನಟಿ 2 ಆಡಿಷನ್ ಎಂದು ಸುಳ್ಳು ಹೇಳಿ ಹಣವನ್ನು ಪಡೆದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ವಾಹಿನಿ ತಿಳಿಸಿದೆ.

ನಿರ್ದೇಶಕ ತರುಣ್ ಸುಧೀರ್ ನಟಿ ಪ್ರೇಮ ನಟ ರಮೇಶ್ ಅರವಿಂದ್ ಹಾಗೂ ಯುವನಟಿ ನಿಶ್ವಿಕಾ ನಾಯ್ಡು ತೀರ್ಪುಗಾರರಾಗಿರುವ ಈ ರಿಯಾಲಿಟಿ ಶೋನಲ್ಲಿ ಯುವ ನಟಿಯರು ಜಡ್ಜ್ಗಳಿಂದ ಸಾಕಷ್ಟು ವಿಷಯಗಳನ್ನು ಕಲಿತುಕೊಳ್ಳಬಹುದು. ಹಾಗೆಯೇ ಅವರು ನಟನೆಯಲ್ಲಿ ಆಗುವ ಸರಿ ತಪ್ಪುಗಳನ್ನು ತಿದ್ದಿತೀಡಿ ನಟನೆಯಲ್ಲಿ ಸುಧಾರಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇದೀಗ ಭವಿಷ್ಯದಲ್ಲಿ ಉತ್ತಮ ನಟಿಯಾಗಬೇಕೆಂದು ಕನಸು ಹೊತ್ತಿರುವ ಯುವತಿಯರ ಮನೆ ಬಾಗಿಲಿಗೆ ಮಹಾನಟಿಯ ಸಿಜನ್ 2 ನ ಆಡಿಷನ್ ಬರುತ್ತಿದ್ದು ಆಸಕ್ತ ಯುವತಿಯರಿಗೆ ಇದೊಂದು ಸೂಕ್ತ ವೇದಿಕೆಯಾಗಿದೆ.

