ಕಟ್ಟಿನಹೊಳೆಯಿಂದ ಯುವಕನ ಮೃತದೇಹ ಮೇಲೇತ್ತಿದ ಈಶ್ವರ್​ ಮಲ್ಪೆ ತಂಡ! ನಡೆದಿದ್ದೇನು?

ajjimane ganesh

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 14, 2025 : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಬಂಟೋಡಿಯಲ್ಲಿ ಹೊಳೆ ದಾಟುತ್ತಿದ್ದ ವೇಳೆ ದುರಂತವೊಂದು ಸಂಭವಿಸಿದೆ.  ಉಕ್ಕಡ ಬಳಸಿ ಇಲ್ಲಿನ ಕಟ್ಟಿನಹೊಳೆ ದಾಟುತ್ತಿದ್ದ ಸಂದರ್ಭದಲ್ಲಿ ಉಕ್ಕಡ ಮಗುಚಿದ ಪರಿಣಾಮ ಯುವಕನೊಬ್ಬ ನೀರು ಪಾಲಾಗಿದ್ದಾನೆ. 

ಹೊಸನಗರ ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿನಹೊಳೆ ಗ್ರಾಮದಲ್ಲಿ ನಿನ್ನೆ  ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿತ್ತು. ಇವತ್ತು ಯುವಕನ ಶವ ಪತ್ತೆಯಾಗಿದೆ. ನುರಿತ ಈಜುಗಾರ ಈಶ್ವರ್ ಮಲ್ಪೆಯವರ ತಂಡ ಸ್ಥಳಕ್ಕೆ ಬಂದು ಮೃತ ಯುವಕನ ಶವವನ್ನ ನೀರಿನಿಂದ ಮೇಲಕ್ಕೆತ್ತಿದೆ. 

ನಿನ್ನೆ ದಿನ ಮೂವರು ಯುವಕರು ಉಕ್ಕಡದ ಮೂಲಕ ಹೊಳೆ ದಾಟಲು ಪ್ರಯತ್ನಿಸುತ್ತಿದ್ದರು. ಆ ಸಮಯದಲ್ಲಿ ಉಕ್ಕಡ ಮಗುಚಿ ಬಿದ್ದ ಪರಿಣಾಮ, ಮೂವರಲ್ಲಿ ಒಬ್ಬರಾದ ಪೂರ್ಣೇಶ (22) ಎಂಬ ಯುವಕ ನೀರುಪಾಲಾಗಿದ್ದು, ಉಳಿದ ಇಬ್ಬರು ಯುವಕರಾದ ಶರತ್ ಮತ್ತು ರಂಜನ್ ಪ್ರಾಣಾಪಾಯದಿಂದ ಪಾರಾಗಿದ್ದರು 

Youth Drowns in Hosanagara as Boat Capsizes
Youth Drowns in Hosanagara as Boat Capsizes

ಈ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ  ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ನೀರಲ್ಲಿ ಮುಳುಗಿದ ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಆದರೆ ನಿನ್ನೆ ರಾತ್ರಿಯಾದರೂ ಯುವಕನ ಶವ ಪತ್ತೆಯಾಗಿರಿಲ್ಲ. 

ಚಿಂಚನೂರು ಮತ್ತು ಬಂಟೋಡಿ ನಡುವೆ ಸುಸಜ್ಜಿತ ಕಾಲುಸಂಕ ನಿರ್ಮಿಸುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಆದರೆ, ಸರ್ಕಾರ ಇದುವರೆಗೆ ಬೇಡಿಕೆಗೆ ಸ್ಪಂದಿಸಿಲ್ಲ. ಹಾಗಾಗಿ ಮಳೆಗಾಲದಲ್ಲಿ ಉಕ್ಕಡವನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಈ ವರ್ಷ ಉಕ್ಕಡ ಓರ್ವ ಯುವಕನ ಪ್ರಾಣವನ್ನು ಬಲಿಪಡಿದಿದೆ. 

Youth Drowns in Hosanagara as Boat Capsizes
Youth Drowns in Hosanagara as Boat Capsizes

Youth Drowns in Hosanagara as Boat Capsizes

Hosanagara tragedy, youth drowns, Uukkada boat accident, Kattinahole village, lack of footbridge, public protest, government negligence ,Malenadu Today News, Hosanagara News, Uukkada Accident ,ಹೊಸನಗರ, ಯುವಕ ಸಾವು, ಉಕ್ಕಡ, ದೋಣಿ ದುರಂತ, ನೀರು ಪಾಲು, ಕಾಲುಸಂಕ, ಸರ್ಕಾರಿ ನಿರ್ಲಕ್ಷ್ಯ, Hosanagara, youth death, boat capsizes, footbridge demand, government negligence.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article