youth congress : ಯುವ ನಾಯಕತ್ವ ಸಮಾವೇಶದಲ್ಲಿ ಅಧಿಕಾರ ಸ್ವೀಕರಿಸಿದ ನೂತನ ಪದಾಧಿಕಾರಿಗಳು 

prathapa thirthahalli
Prathapa thirthahalli - content producer

youth congress : ಶಿವಮೊಗ್ಗದ ಜಂಜಾರ ಕನ್ವೆನ್ಷನ್​ ಹಾಲ್​ನಲ್ಲಿ ಇಂದು ಯುವ ನಾಯಕತ್ವ ಸಮಾವೇಶ ಮತ್ತು ಜಿಲ್ಲಾ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ನೂತನ ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಹರ್ಷಿತ್​ ಗೌಡ ಸೇರಿದಂತೆ ಇತರೆ ಪದಾಧಿಕಾರಿಗಳು ಯುವ ಕಾಂಗ್ರೆಸ್‌ ಧ್ವಜ ಪಡೆದು, ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ನೂತನ ಪದಾಧಿಕಾರಿಗಳಿಗೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಆರ್​ ಪ್ರಸನ್ನ ಕುಮಾರ್​ ಪ್ರಮಾಣವಚನ ಭೊಧಿಸಿದರು. 

youth congress : ಈ  ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು 

ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ 11 ವರ್ಷ ಯುವ ಘಟಕದ ಅಧ್ಯಕ್ಷನಾಗಿದ್ದೆ .ಯುವ ಘಟಕದಿಂದಲೇ ನಾಯಕರು ತಯಾರಾಗುತ್ತಾರೆ ನೀವು ಯಾವುದೇ ಟೀಕಾ ಟಿಪ್ಪಣಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.ನಮ್ಮ ಗ್ಯಾರಂಟಿಗಳನ್ನು ನಾವು ಅನುಷ್ಠನಾಗೊಳಿಸಿದ್ದೇವೆ. ಮಾತು ಕೊಟ್ಟಂತೆ ನಡೆದುಕೊಂಡ ಪಕ್ಷ ಯಾವುದಾದರು ಇದ್ದರೆ ಅದು ಕಾಂಗ್ರೆಸ್ ಮಾತ್ರ. ಅಧಿಕಾರ ಇರುತ್ತೇ ನಾಳೆ ಹೋಗುತ್ತೆ ಅಧಿಕಾರ ಸಿಕ್ಕಾಗ ಉತ್ತಮ ಕೆಲಸ ಮಾಡಬೇಕಿದೆ ಎಂದರು.

youth congress : ಚುನಾವಣೆಯಲ್ಲಿ  ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಬೇಕು|  ಬಿ.ವಿ ಶ್ರೀನಿವಾಸ್

ನಂತರ ರಾಷ್ಟ್ರೀಯ ಯುವ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್​ ಮಾತನಾಡಿ ಬಿಜೆಪಿಯವರು ಪ್ರತಿ ಬೂತ್ ನಲ್ಲಿ ಸುಳ್ಳು ಹೇಳೊದಕ್ಕೆ ಅಂತಾನೆ ಇಬ್ಬರನ್ನ ನೇಮಿಸಿದ್ದಾರೆ. ನಾವು ಸಹ ಪ್ರತಿ ಬೂತ್ ಗೆ ಒಬ್ಬರನ್ನ ನೇಮಿಸಬೇಕು. ಬಿಜೆಪಿ ಎಂದರೆ ಸುಳ್ಳು ಬಿಜೆಪಿ ಎಂದರೆ ಭ್ರಷ್ಟಾಚಾರ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು .ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಬೇಕು ಯುವ ಕಾಂಗ್ರೆಸ್ ನಿಂದ ಹೆಚ್ಚಿನ ಸೀಟ್ ಗಳನ್ನು ಗೆಲ್ಲಿಸಲು ಸಹಕಾರಿಯಾಗಬೇಕು ಎಂದರು. 

ಸಮಾವೇಶನದಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಭಂಡಾರಿ,ಆಯನೂರು ಮಂಜುನಾಥ್ ,ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್, ನಿಗಮ ಮಂಡಲಿ ಅಧ್ಯಕ್ಷರು ಸೇರಿದಂತೆ ಯುವ ಮುಖಂಡರು ಭಾಗಿಯಾಗಿದ್ದರು.

Share This Article