youth congress : ಯೂತ್​ ಕಾಂಗ್ರೆಸ್​ ವತಿಯಿಂದ 2 ವರ್ಷ ನೂರು ಹರ್ಷ ಎಂಬ ಕಿರು ಹೊತ್ತಿಗೆ ಬಿಡುಗಡೆ 

youth congress : 2 ವರ್ಷ ನೂರು ಹರ್ಷ ಕಿರು ಹೊತ್ತಿಗೆ ಬಿಡುಗಡೆ  ಮಾಡಿದ ಯೂತ್​ ಕಾಂಗ್ರೆಸ್​ 

ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರ ಕಾರ್ಯವೈಖರಿಯ ಕುರಿತಾಗಿ  ಜಿಲ್ಲಾ ಯುವ ಕಾಂಗ್ರೆಸ್ ಇಂದು 02 ವರ್ಷ ನೂರು ಹರ್ಷ ಎಂಬ ಕಿರು ಹೊತ್ತಿಗೆ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

youth congress :  ಈ ಕುರಿತು ಸೂಡಾ ಸದಸ್ಯ ಪ್ರವೀಣ್  ಪತ್ರಿಕಾ ಭವನದಲ್ಲಿ  ಸುದ್ಧಿಗೋಷ್ಠಿ ನಡೆಸಿ ಮಾತನಾಡಿ ಕಾಂಗ್ರೆಸ್ ಸರ್ಕಾರ 2 ವರ್ಷ ಯಶಸ್ವಿಯಾಗಿ ಪೂರೈಸಿದೆ. ನಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಪಂಚ ಗ್ಯಾರಂಟಿ ಗಳ ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಈ ಹಿನ್ನಲೆ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಕಾರ್ಮಿಕ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡರು. ಅವರು ಅಧಿಕಾರ ವಹಿಸಿಕೊಂಡ ನಂತರ ಕಾರ್ಮಿಕ ವಲಯದಲ್ಲಿ ಹೆಚ್ಚಿನ ಅಭಿವೃದ್ದಿಯನ್ನು ಕೈಗೊಳ್ಳಲು ಸಾಧ್ಯವಾಯಿತು. ಗಿಕ್​ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮೆ, ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ, 100 ಕ್ಕೂ ಹೆಚ್ಚು ಹೈಟೆಕ್​ ಸಂಚಾರಿ ವಾಹನಗಳು ಸೇರಿದಂತೆ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರ 02 ವರ್ಷದ ಸಾಧನೆಯ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಯುವ ಕಾಂಗ್ರೆಸ್​ ಮುಖಂಡರು ಇಂದು 2 ವರ್ಷ ನೂರು ಹರ್ಷ ಎಂಬ ಕಿರು ಹೊತ್ತಿಗೆ ಕರಪತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.

ನಂತರ 8 ಪುಟಗಳ 2 ವರ್ಷ ನೂರು ಹರ್ಷ ಎಂಬ ಕಿರು ಹೊತ್ತಿಗೆ ಕರ ಪತ್ರವನ್ನು  ಬಿಡುಗಡೆ ಮಾಡಲಾಯಿತು. ಈ ಕರಪತ್ರದಲ್ಲಿ 2 ವರ್ಷದಲ್ಲಿ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಇಲಾಖೆಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳ ಬಗ್ಗೆ ನಮೂದಿಸಿದ್ದರು. ಈ ಸಂದರ್ಭದಲ್ಲಿ  ಎಚ್.ಪಿ.ಗಿರೀಶ್, ರಂಗನಾಥ್,​ ಲೋಕೇಶ್,​  ಶರತ್​ ಮರಿಯಪ್ಪ, ಶರತ್, ಇರ್ಫಾನ್​ ಖಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

Leave a Comment