ಶಿವಮೊಗ್ಗ : ಜಿಲ್ಲೆಯ ಸೊರಬ ತಾಲ್ಲೂಕಿನ ಕೈಸೋಡಿಯಲ್ಲಿ 21 ವರ್ಷದ ರಾಕೇಶ್ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪದವಿ ಮುಗಿಸಿ ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಈ ಯುವಕ, ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಈತ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗ ತರಬೇಕು ಮತ್ತು ಮಕ್ಕಳ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ಪ್ರೋತ್ಸಾಹಿಸಬೇಕು ಅಂತಾ ತಿಳಿಸಿದ್ದಾನೆ. ಮೇಲಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಯಶ್ ರವರು (yash dailoge)ಹೇಳಿದ ಜೀವನಾನುಭವವನ್ನು ಪಾಠದಲ್ಲಿ ಸೇರಿಸಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ತಿಳಿಸಿ ಎಂದು ಕೋರಿದ್ದಾನೆ.

ತಾನು ಆನ್ಲೈನ್ ಮೆಂಟಲ್ ಗೈಡ್ಲೈನ್ಸ್ ತಗೊಂಡಿದ್ದರಿಂಧ ತನ್ನ ಸ್ಥೈರ್ಯ ಕುಸಿದಿದ್ದಾಗಿ ಹೇಳಿಕೊಂಡಿರುವ ಯುವಕ, ವಾಟ್ಸಾಪ್ನಲ್ಲಿ ಯಾವುದೇ ಮೆಂಟಲ್ ಸಪೋರ್ಟ್ ತೆಗೆದುಒಳ್ಳಬೇಡಿ ಎಂದು ತಿಳಿಸಿದ್ದಾನೆ. ಪೋಷಕರು ಮತ್ತು ಗುರುಗಳು ಮಕ್ಕಳ ಮೇಲೆ ದೊಡ್ಡ ಆಸೆಗಳನ್ನು ಹೇರಬಾರದು. ಪ್ರತಿಯೊಬ್ಬ ಮಗುವಿನಲ್ಲೂ ಒಂದೊಂದು ಕಲೆ ಇರುತ್ತದೆ, ಅದನ್ನು ದ್ರೋಣಾಚಾರ್ಯರು ಅರ್ಜುನನ ಸಾಮರ್ಥ್ಯ ಗುರುತಿಸಿದಂತೆ ಪತ್ತೆಹಚ್ಚಿ ಬೆಂಬಲ ನೀಡಬೇಕು ಎಂದು ಈತ ಆಶಿಸಿದ್ದಾನೆ. ಹಣಕ್ಕಾಗಿ ಓದುವುದನ್ನು ನಿಲ್ಲಿಸಿ, ಇಷ್ಟಪಟ್ಟ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಮಕ್ಕಳಿಗೆ ಕಲಿಸಬೇಕು ಎಂದು ಮನವಿ ಮಾಡಿದ್ದಾನೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.