KARNATAKA NEWS/ ONLINE / Malenadu today/ Nov 4, 2023 SHIVAMOGGA NEWS
SHIVAMOGGA | ಶಿವಮೊಗ್ಗ KSRTC bus stand ನಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ದೊಡ್ಡಪೇಟೆ ಪೊಲೀಸರು ಹಾಗೂ ಹೀಗೂ ಭೇದಿಸಿದ್ದರು. ಈ ಪ್ರಕರಣದಲ್ಲಿ ಓರ್ವ ಲೇಡಿ ಕಳ್ಳಿಯನ್ನು ಅರೆಸ್ಟ್ ಸಹ ಮಾಡಿದ್ದರು.ಇದರ ಬೆನ್ನಲ್ಲೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ IPC 1860 (U/s-379) ಅಡಿಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ. ಅರ್ಥಾತ್ ಮತ್ತೊಂದು ಕಳ್ಳತನ ಪ್ರಕರಣ ಶಿವಮೊಗ್ಗ ಬಸ್ ನಿಲ್ದಾಣಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ
ಏನಿದು ಪ್ರಕರಣ?
ಕಳೆದ ಮೂರನೇ ತಾರೀಖು ಈ ಬಗ್ಗೆ ಕಪ್ಲೆಂಟ್ ದಾಖಲಾಗಿದ್ದು, 24-08-23 ರಂದು ನಡೆದ ಪ್ರಕರಣ ಇದಾಗಿದೆ . ಮೂಲತಃ ಮೂಡಬಿದರೆ ಮೂಲದ ಮಹಿಳೆಯೊಬ್ಬರು ಶಿವಮೊಗ್ಗಕ್ಕೆ ಬಂದಿದ್ದು, ಇಲ್ಲಿಂದ ಚಿತ್ರದುರ್ಗ ಹೋಗುವ ಸಲುವಾಗಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದಾರೆ. ಈ ವೇಳೆ ರಶ್ ಇದ್ದ ಹಿನ್ನೆಲೆಯಲ್ಲಿ ಅವರಿಗೆ ಏನು ನಡೆಯಿತು ಎಂಬುದು ಗೊತ್ತಾಗಿಲ್ಲ. ಬಳಿಕ ಚಿತ್ರದುರ್ಗದಲ್ಲಿ ತಮ್ಮ ಸಂಬಂಧಿ ನಿವಾಸಕ್ಕೆ ತೆರಳಿ ತಮ್ಮ ಬ್ಯಾಗ್ನಲ್ಲಿ ನೋಡುವಾಗ ಚಿನ್ನಾಭರಣ ಇದ್ದ ಬ್ಯಾಗ್ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ದೂರು ನೀಡಲು ಅವರಿಗೆ ಡ್ಯೂಟಿ ಇದ್ದ ಕಾರಣಕ್ಕೆ ತಡವಾಗಿ ಬಂದು ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭವಾಗಿದೆ
