ವಿಮಾನ ನಿಲ್ದಾಣದಲ್ಲಿ ಭೂಮಿ ಕೊಟ್ಟ ‘ರೈತ ‘ ರಿಗೆ ಸನ್ಮಾನ ಮಾಡಲು ಆಕ್ಷೇಪ ವ್ಯಕ್ತವಾಗಿದ್ದೇಕೆ? ಕಾರ್ಯಕ್ರಮದಲ್ಲಿ ಘೋಷಣೆ ಕೇಳಿಬಂದಿದ್ದೇಕೆ?

Why was there an objection to felicitating the 'farmer' who gave land at the airport? ವಿಮಾನ ನಿಲ್ದಾಣದಲ್ಲಿ ಭೂಮಿ ಕೊಟ್ಟ ‘ರೈತ ‘ ರಿಗೆ ಸನ್ಮಾನ ಮಾಡಲು ಆಕ್ಷೇಪ ವ್ಯಕ್ತವಾಗಿದ್ದೇಕೆ?

ವಿಮಾನ ನಿಲ್ದಾಣದಲ್ಲಿ ಭೂಮಿ ಕೊಟ್ಟ ‘ರೈತ ‘ ರಿಗೆ ಸನ್ಮಾನ ಮಾಡಲು ಆಕ್ಷೇಪ ವ್ಯಕ್ತವಾಗಿದ್ದೇಕೆ? ಕಾರ್ಯಕ್ರಮದಲ್ಲಿ ಘೋಷಣೆ ಕೇಳಿಬಂದಿದ್ದೇಕೆ?

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಯಾನ ಕಾರ್ಯಾಚರಣೆ ಹಾಗೂ ಸಾಮಾಜಿಕ ಜಾಲತಾಣ ಉದ್ಘಾಟನೆ ವೇಳೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿಕೊಟ್ಟ ರೈತರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು. 

ವಿಮಾನಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ , ಶಿವಮೊಗ್ಗ ಏರ್​ಪೋರ್ಟ್​ಗಾಗಿ ಭೂಮಿಕೊಟ್ಟ ರೈತರನ್ನು ಸನ್ಮಾನಿಸಲು ಮಾಜಿ ಸಿಎಂ ಯಡಿಯೂರಪ್ಪನವರು ಮುಂದಾದರು, ಈ ವೇಳೆ ಕಾಂಗ್ರೆಸ್​ನ ವಿಜಯಕುಮಾರ್ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ನೀವು ರೈತರಿಗಲ್ಲ, ಬ್ರೋಕರ್​ಗಳಿಗೆ ಸನ್ಮಾನ ಮಾಡುತ್ತಿದ್ದೀರಾ ಎಂದು ಘೋಷಣೆ ಕೂಗಿದರು. ಅಲ್ಲದೆ ನಿಜವಾದ ರೈತರನ್ನು ಸನ್ಮಾನಿಸುವಂತೆ ಆಗ್ರಹಿಸಿದ್ರು.  ಈ ವೇಳೆ ಮಧ್ಯಪ್ರವೇಶ ಮಾಡಿದ ಸಂಸದ ಬಿ.ವೈ.ರಾಘವೇಂದ್ರರವರು,  ನಮಗೆ ಎಲ್ಲರೂ ಸಹ ರೈತರೇ, ಇದರಲ್ಲಿ ಭೇದಭಾವ ತೋರಲು ಆಗದು ಎಂದು ಅಸಮಾಧಾನಗೊಂಡವರನ್ನು ಸಮಾಧಾನಪಡಿಸಿದರು. ಇನ್ನೊಂದೆಡೆ ಸ್ಥಳದಲ್ಲಿದ್ದ ಪೊಲೀಸರು ಸನ್ನಿವೇಶವನ್ನು ತಿಳಿಗೊಳಿಸಿದರು. 


ಇನ್ನಷ್ಟು ಸುದ್ದಿಗಳು