ಫಿಕ್ಸ್​ ಆಗ್ತಿದ್ಯಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ! ಶಿವಣ್ಣ ದಂಪತಿಯ ಪ್ರತಿಕ್ರಿಯೆ ಏನು ಗೊತ್ತಾ?

Who is the Congress candidate from Shivamogga Lok Sabha constituency? Do you know what Shivanna's reaction was?

ಫಿಕ್ಸ್​ ಆಗ್ತಿದ್ಯಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ! ಶಿವಣ್ಣ ದಂಪತಿಯ ಪ್ರತಿಕ್ರಿಯೆ ಏನು ಗೊತ್ತಾ?

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS  

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಎದುರಾಳಿ ಯಾರು? ಈ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಹುಡುಕುತ್ತಿದೆ. ಒಂದು ಕಡೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಮ್ಮ ಸಹೋದರಿ ಗೀತಾ ಶಿವರಾಜ್​ ಕುಮಾರ್​ ರನ್ನ ಅಭ್ಯರ್ಥಿಯನ್ನಾಗಿಸಲು ಪ್ರಯತ್ನ ನಡೆಸ್ತಿರುವುದು ರಾಜಕೀಯ ಅಖಾಡದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ನಿಟ್ಟಿನಲ್ಲಿ ಶಿವರಾಜ್​ ಕುಮಾರ್​ ಹಾಗೂ ಗೀತಾ ಶಿವರಾಜ್​ ಕುಮಾರ್​, ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ರವರನ್ನ ಭೇಟಿಯಾಗಿದ್ದಾರೆ. 

ಈ ಎರಡು ಭೇಟಿಗಳು ಕೇವಲ ಕ್ಯಾಶ್ಯುವಲ್ ವಿಸಿಟ್ ಎಂದು ಹೇಳುತ್ತಿದ್ದರೂ ಸಹ ದಂಪತಿಗಳ ಭೇಟಿ ಹಾಗೂ ಮಾತುಕತೆ ಕುತೂಹಲ ಕೆರಳಿಸುತ್ತಿದೆ. ಇದರ ನಡುವೆ ಡಿಕೆ ಶಿವಕುಮಾರ್​ ರವರ ಭೇಟಿಯ ಬಳಿಕ ಮಾತನಾಡಿದ ಗೀತಾ ಶಿವರಾಜ್​ ಕುಮಾರ್​​ರಿಗೆ ಮಾದ್ಯಮದ ಕಡೆಯಿಂದ ಇದು ಲೋಕಸಭಾ ಚುನಾವಣೆಯ ಸಿದ್ದತೆಯೇ ಎಂಬ ಪ್ರಶ್ನೆ ಎದುರಾಗಿತ್ತು. 

ಪ್ರಶ್ನೆಗೆ ಉತ್ತರಿಸಿದ ಗೀತಾ ಶಿವರಾಜ್​ ಕುಮಾರ್  ಸಿದ್ದತೆ ಅಂತೇನೂ ಇಲ್ಲ. ಆದರೆ ಈ ಬಗ್ಗೆ ತಮ್ಮ ತಮ್ಮ ಹಾಗೂ ಅವರು(ಶಿವರಾಜ್ ಕುಮಾರ್​) ಹಾಗೂ ಪಕ್ಷ ಪ್ರಾಪರ್​ ತೀರ್ಮಾನವನ್ನು ಕೈಗೊಳ್ಳುತ್ತದೆ ಎಂದು ಹೇಳಿದ್ರು. ಇದೇ ಮೊದಲ ಸಲ ಇಂತಹದ್ದೊಂದು ಪ್ರತಿಕ್ರಿಯೆಯನ್ನ ಗೀತಾ ಶಿವರಾಜ್ ಕುಮಾರ್, ನೀಡಿದ್ಧಾರೆ.  ಇನ್ನೂ ಶಿವಣ್ಣ ಕೂಡ , ಡಿಕೆ ಶಿವಕುಮಾರ್​ರವರ ಭೇಟಿಯನ್ನು ಕ್ಯಾಶ್ಯುವಲ್ ವಿಸಿಟ್​ ಎಂದಿದ್ದಾರೆ. 

ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರು ಅದಾಗಲೇ ತಮ್ಮ ತಂದೆಯ ನೆರಳಿನಿಂದ ಹೊರಬಂದು ತಮ್ಮದೆ ಆದ ವೇದಿಕೆಯಲ್ಲಿ ಅಭಿವೃದ್ಧಿ ಕೆಲಸಗಳ ಉದ್ಘಾಟನೆಯ ದಿನಾಂಕವನ್ನು ಸರತಿ ಸಾಲಿನಲ್ಲಿ ಘೋಷಿಸುತ್ತಿದ್ಧಾರೆ. ಅವರ ಎದುರು  ಕಾಂಗ್ರೆಸ್​ ಪಕ್ಷ ಗೀತಾ ಶಿವರಾಜ್​ ಕುಮಾರ್​ರನ್ನ ಕಣಕ್ಕಿಳಿಸುತ್ತಾ? ಅಥವಾ ಸ್ವತಃ ಶಿವರಾಜ್​ ಕುಮಾರ್​ರವರನ್ನೆ ರಾಜಕಾರಣಕ್ಕೆ ಕರೆತಂದು ಸ್ಪರ್ದೆಗೆ ಶ್ರೀಕಾರ ಹಾಕಿಸುತ್ತಾ? ಅಥವಾ ಸದ್ಯ ಚರ್ಚೆಯಲ್ಲಿರುವಂತೆ ಕಿಮ್ಮನೆ ರತ್ನಾಕರ್​ರವರ ಹೆಸರು ಮುನ್ನೆಲೆಗೆ ಬರುತ್ತಾ? ಇದೆಲ್ಲದರ ಆಚೆಗೆ ಅಚ್ಚರಿ ಅಭ್ಯರ್ಥಿ ಆಯ್ಕೆಯಾಗುತ್ತಾರಾ? ಅಭಯಹಸ್ತದಲ್ಲಿನ ಭವಿಷ್ಯದಲ್ಲಿ ಉತ್ತರ ಸಿಗಲಿದೆ.  


ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ದುಡ್ಡನ್ನ ಲಪಟಾಯಿಸಿ ಎಸ್ಕೇಪ್ ಆದ ಸಿಬ್ಬಂದಿ! ಏನಿದು ಪ್ರಕರಣ! ನಡೆದಿದ್ದೆಲ್ಲಿ

ಶಿವಮೊಗ್ಗ/ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಬ್ಯಾಂಕ್​​ಗೆ ಕಟ್ಟಬೇಕಿದ್ದ ಧರ್ಮಸ್ಥಳ ಸಂಘದ ಹಣವನ್ನು ಕದ್ದು ಪರಾರಿಯಾದ ಬಗ್ಗೆ ಕಂಪ್ಲೆಂಟ್ ದಾಖಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ. 

ಏನಿದು ಪ್ರಕರಣ?

ದಿನಾಂಕ 20-06-2023 ರಂದು ನಡೆ ಪ್ರಕರಣ ಇದಾಗಿದೆ. ಈ ಸಂಬಂಧ ತಾಲ್ಲೂಕು ಯೋಜನಾಧಿಕಾರಿ ದೂರು ನೀಡಿದ್ಧಾರೆ. ಕರಾವಳಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಿಕೊಂಡಿದೆ. ಶಿವಮೊಗ್ಗದಲ್ಲಿಯು  ಸುಮಾರು 2750 ಸಂಘಗಳನ್ನು ರಚಿಸಲಾಗಿದೆ. ಪ್ರತಿವಾರದ ಸಭೆಯ ನಂತರ ಸಂಘದ ಸದಸ್ಯರು ಉಳಿತಾಯ ನಿದಿ ಹಾಗೂ ಸಾಲ ಮರುಪಾವತಿಯನ್ನು ಮಾಡುತ್ತಾರೆ. ಆ ಹಣವನ್ನು ಬ್ಯಾಂಕ್​ಗೆ ಪಾವತಿಸಲು ಯೋಜನೆಯಲ್ಲಿ ಗ್ರಾಹಕರ ಸೇವಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ವ್ಯವಸ್ಥೆಯಡಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಅವರ ಮೂಲಕ ಸಂಘದ ಹಣವನ್ನು ಸ್ವೀಕರಿಸಿ ಬ್ಯಾಂಕ್​ಗೆ ಕಟ್ಟಬೇಕು. 

ಆದರೆ ಹಸೂಡಿಯಲ್ಲಿ ಅಲ್ಲಿಯ ನಿವಾಸಿ ಪರಮೇಶ್ವರ್​ ಕಳೆದ ಇಪ್ಪತ್ತನೇ ತಾರೀಖು ತಾನು ಸಂಗ್ರಹಿಸಿದ್ದ  2,70.209/- (ಎರಡು ಲಕ್ಷದ ಎಪ್ಪತ್ತು ಸಾವಿರದ ಇನ್ನೂರ ಒಂಭತ್ತು) ರೂ ಗಳನ್ನು ಬ್ಯಾಂಕ್​ ಕಟ್ಟಿಲ್ಲ. ಇದರಲ್ಲಿ 1,880/- ರೂ ಗಳನ್ನು ಡ್ರಾವರ್ ನಲಿ ಬಿಟ್ಟು ಉಳಿದ 2.68,329 ರೂಪಾಯಿಯನ್ನು ತೆ್ಗೆದುಕೊಂಡು ಹೋಗಿದ್ದಾನೆ. ಈ ಸಂಬಂಧ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು,.IPC 1860 (U/s-420) ಅಡಿಯಲ್ಲಿ ಕೇಸ್​ ದಾಖಲಾಗಿದೆ.