ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ (thirtahalli) ಮೊನ್ನೆ ಮೊನ್ನೆ ಇಡಿ ಅಧಿಕಾರಿಗಳು ಬಂದು ಹೋಗಿದ್ದರು. ಈ ಸುದ್ದಿಯನ್ನು ‘ದಾಳಿ’ ಎಂದು ಬಿಂಬಿಸಿ, ಮಾಜಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸುವ ಪ್ರಯತ್ನ ನಡೆದಿತ್ತು ಎಂದು ಕಿಮ್ಮನೆ ರತ್ನಾಕರ್ ಆರೋಪಿಸಿದ್ದರು. ಕಚೇರಿ ಬಾಡಿಗೆಯ ವಿವರ ಕೇಳಲು ಬಂದಿದ್ದನ್ನ ದಾಳಿ ಎಂದು ಪುಕಾರು ಮಾಡಿದ್ದಕ್ಕೆ ಕಿಮ್ಮನೆ ರತ್ನಾಕರ್ ಆಕ್ರೋಶ ಹೊರಹಾಕಿದ್ದರು.
ಸಾಗರ ಟೌನ್ನಲ್ಲಿ ಹಲ್ಲೆಗೆ ಯತ್ನ ಕೇಸ್/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ
ಇಡಿ ದಾಳಿ ಮತ್ತು ಅದರ ಹಿಂದಿ ಅಪಪ್ರಚಾರದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಆರೋಪಿಸಿರುವ ಅವರು, ಗೃಹಸಚಿವರು ಹಾಗೂ ಬಿಜೆಪಿ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಗೃಹಸಚಿವರ ರಾಜೀನಾಮೆಗೆ ಫೆಬ್ರವರಿಯ ಗಡುವು ಕೊಟ್ಟಿದ್ದಾರೆ. ಅದರೆ ಬೆನ್ನೆಲ್ಲೆ ಸ್ಯಾಂಟ್ರೋ ರವಿಗೆ (santro ravi ) ಸಂಬಂಧಿಸಿದ ವಾಟ್ಸ್ಯಾಪ್ ಸ್ಕ್ರೀನ್ ಶಾಟ್ಗಳು ಸಖತ್ ವೈರಲ್ ಆಗುತ್ತಿದ್ದು, ಕಿಮ್ಮನೆ ರತ್ನಾಕರ್ರವರ ಫ್ಯಾನ್ಸ್ ಫೇಜ್ ಹಾಗೂ ಅನಧಿಕೃತ ಫೇಸ್ಬುಕ್ ಅಕೌಂಟ್ಗಳಲ್ಲಿ ಈ ವಾಟ್ಸ್ಯಾಪ್ ಫೋಟೋಗಳು ಹರಿದಾಡುತ್ತಿದೆ.
ಸಾಗರ ಟೌನ್ನಲ್ಲಿ ನಡೆದ ಹಲ್ಲೆ ಯತ್ನ ಕೇಸ್ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ
hubby ಎಂಬ ಹೆಸರಿನ ವಾಟ್ಸ್ಯಾಪ್ ಅಕೌಂಟ್ನ ಸ್ಕ್ರೀನ್ ಶಾಟ್ಗಳಲ್ಲಿ ಸ್ಯಾಂಟ್ರೋ ರವಿಯ ಫೋಟೋ ಹಾಗೂ ಆತನದ್ದು ಎನ್ನಲಾದ ಬರಹಗಳು ಕಂಡುಬರುತ್ತಿದೆ. ಸದ್ಯ ಈ ಫೋಟೋಗಳು ವೈರಲ್ ಆಗುತ್ತಿದ್ದು, ಇದರಲ್ಲಿ ಆರಗ ಜ್ಞಾನೇಂದ್ರವರ ವಿರುದ್ಧ ಪರೋಕ್ಷವಾಗಿ ಆರೋಪ ಹೊರಿಸಲಾಗುತ್ತಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ: ಎಸ್ಸೆಸ್ಸೆಲ್ಸಿ, ಪಿಯುಸಿ ಹೊಸ ಪರೀಕ್ಷಾ ಮಂಡಳಿಗೆ ಇನ್ಮುಂದೆ ನೂತನ ವೆಬ್ಸೈಟ್
ಸ್ಕ್ರೀನ್ ಶಾಟ್ 1
ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಅದೀಕ್ಷಕರನ್ನ ವರ್ಗಾವಣೆ ಮಾಡಲು ಸೂಚಿಸಿದ ಲೆಟರ್ ಹೆಡ್ವೊಂದರ ಸ್ಕ್ರೀನ್ ಶಾಟ್ನ್ನು ಕಿಮ್ಮನೆ ರತ್ನಾಕರ್ ಹೆಸರಿನ ಫೇಸ್ ಬುಕ್ ಫೇಜ್ನಲ್ಲಿ (https://www.facebook.com/kimmaneratnakara) ಪ್ರಕಟಿಸಲಾಗಿದ್ದು, ಅದರಲ್ಲಿ ಗೃಹಸಚಿವರ ವರ್ಗಾವಣೆ ಆದೇಶ ಪತ್ರವೊಂದಕ್ಕೆ ಸ್ಯಾಂಟ್ರೋ ರವಿ ಸಂಭ್ರಮಿಸಿದ್ದಾನೆ.
ಸ್ಕ್ರೀನ್ ಶಾಟ್ 2
ಇನ್ನೂ ತೀರ್ಥಹಳ್ಳಿ ನಾಗರಿಕರ ವಾಟ್ಸ್ಯಾಪ್ಗಳಲ್ಲಿ ಐದಾರು ರೀತಿಯ ಸ್ಕ್ರೀನ್ ಶಾಟ್ಗಳು ಹರಿದಾಡುತ್ತಿದ್ದು, ಸಂಚಲನ ಮೂಡಿಸುತ್ತಿದೆ. ಈ ಸ್ಕ್ರೀನ್ ಶಾಟ್ನಲ್ಲಿ ಸ್ಯಾಂಟ್ರೋ ರವಿ ತೀರ್ಥಹಳ್ಳಿಗೆ ಬರುತ್ತಿದ್ದ , ಆರಗರನ್ನು ಭೇಟಿಯಾಗುತ್ತಿದ್ದ, ಅವರ ಮಗನನ್ನು ಭೇಟಿಯಾಗುತ್ತಿದ್ದ ಎಂಬುದಕ್ಕೆ ಪೂರಕವಾದ ಟೆಕ್ಸ್ಟ್ಗಳು ಕಾಣ ಸಿಗುತ್ತಿದೆ.

ಇತ್ತೀಚೆಗಷ್ಟೆ ವಾಟ್ಸ್ಯಾಪ್ ಚಾಟ್ನ ಸಂದೇಶವೊಂದು ಟಿವಿಯೊಂದರಲ್ಲಿ ಪ್ರಸಾರವಾಗಿತ್ತು. ಅದರ ಬೆನ್ನಲ್ಲೆ ಈ ಸ್ಕ್ರೀನ್ ಶಾಟ್ಗಳು ವೈರಲ್ ಆಗಿವೆ. ಕಾಂಗ್ರೆಸ್ ಪಕ್ಷದಲ್ಲಿನ ಸೋಶಿಯಲ್ ಮೀಡಿಯಾಗಳಲ್ಲಿ ಇವುಗಳು ಹರಿದಾಡುತ್ತಿದೆ. ಇನ್ನೂ ಕಿಮ್ಮನೆ ರತ್ನಾಕರ್ ಸ್ಯಾಂಟ್ರೋ ರವಿ ವಿಚಾರದಲ್ಲಿ ಆರಗರವರೇ ಮೊದಲ ಆರೋಪಿ ಎಂದು ಆರೋಪಿಸಿದ್ದರು. ಇದರ ನಡುವೆ ಗುಜರಾತ್ಗೆ ಹೋಗಿ ಗೃಹಸಚಿವರು ಹೋಗಿ ಬಂದಿರುವುದಕ್ಕೂ, ಸ್ಯಾಂಟ್ರೋ ರವಿ ಗುಜರಾತ್ನಲ್ಲಿ ಸಿಕ್ಕಿಬಿದ್ದಿರುವುದಕ್ಕೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಒಟ್ಟಾರೆ, ಆರಗ ಜ್ಞಾನೇಂದ್ರರವರ ವಿರುದ್ಧ ಆಕ್ರೋಶ ಹೊರಹಾಕಿರುವ ಕಿಮ್ಮನೆ ರತ್ನಾಕರ್ ಮತ್ತು ತೀರ್ಥಹಳ್ಳಿ ಕಾಂಗ್ರೆಸ್ ಸ್ಯಾಂಟ್ರೋ ರವಿ ವಿಚಾರ ದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಇನ್ನಷ್ಟು ತೀವ್ರಗೊಳ್ಳುವ ಸಾದ್ಯತೆ ಇದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
