SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024
ಮೆಟಾ ಮಾಲಿಕತ್ವದ Whatsapp ಇದೀಗ ಮತ್ತೊಂದು ಬಿಗ್ ಅಪ್‌ಡೇಟ್‌ನೊಂದಿಗೆ ಬರುತ್ತಿದೆ. ಸದ್ಯ ಬೇಟಾ ವರ್ಶನ್‌ನಲ್ಲಿ ಈ ಅಪ್‌ಡೇಟ್ ತರುತ್ತಿರುವ ವಾಟ್ಸಾಪ್ ಬಿಗ್ ಪ್ಲಾನ್ ಹೊಂದಿದೆ. ವಾಟ್ಸಾಪ್ ಬೆಟಾ ಇನ್ಫೋ ಚಾನಲ್‌ನ ಮಾಹಿತಿ ಪ್ರಕಾರ, ಸದ್ಯದಲ್ಲಿಯೇ ವಾಟ್ಸಾಪ್‌ನಿಂದ ಫೈಲ್, ಫೋಟೋ, ಮಾಹಿತಿಗಳನ್ನು ನೇರವಾಗಿ ಬೇರೆ APP ಗಳ ಜೊತೆಗೂ ಹಂಚಿಕೊಳ್ಳಬಹುದಾಗಿದೆ.
ಸದ್ಯ ವಾಟ್ಸಾಪ್‌ನಲ್ಲಿರುವ ಫೈಲ್‌ಗಳನ್ನ FACEBOOK ನಲ್ಲಿ ಷೇರ್ ಮಾಡಬೇಕಾದಲ್ಲಿ ಫೈಲ್ ಮೊದಲು ಡೌನ್‌ಲೋಡ್ ಮಾಡಿಕೊಂಡು, ಆನಂತರ ಮತ್ತೆ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಬೇಕು. ವಾಟ್ಸಾಪ್‌ನ ಹೊಸ ಫೀಚರ್ ಈ ಕಿರಿಕಿರಿಯನ್ನ ತಪ್ಪಿಸಲಿದೆ. ಹೊಸ ಬೇಟಾ ವರ್ಶನ್‌ನಲ್ಲಿ ವಾಟ್ಸಾಪ್‌ನಲ್ಲಿರುವ ಫೈಲ್ ಅಥವಾ ಫೋಟೋ, ವಿಡಿಯೋಗಳನ್ನು ನೇರವಾಗಿ ಫೇಸ್‌ಬುಕ್ ಫೋಸ್ಟ್ ಮಾಡಬಹುದು ಇನ್‌ಸ್ಟಾಗ್ರಾಮ್ ಸ್ಟೋರಿಸ್‌ಗೆ ಹಾಕಬಹುದು. ಅಥವಾ ಮೋರ್ ಎನ್ನುವ ಆಪ್ಶನ್ ಮೂಲಕ X (formerly Twitter) ಅಥವಾ ಸ್ನ್ಯಾಪ್‌ಚಾಟ್‌ನಂತಹ ಮೆಟಾ ಮಾಲೀಕತ್ವವಿಲ್ಲದ ಆಪ್‌ಗಳ ಜೊತೆಗೂ ಷೇರ್ ಮಾಡಬಹುದು.
ವಾಟ್ಸಾಪ್ 2.24.14.15 beta update ಈ ಫ್ಯೂಚರ್‌ನ್ನ ಜೊತೆಗೆ ತರಲಿದೆ. ವಾಟ್ಸಾಪ್‌ನಲ್ಲಿ ಬಾಟಮ್ ಬಾರ್ ಆಪ್ಶನ್ ತರುವ ಮೂಲಕ, ಹೊಸ ಪ್ಯೂಚರ್ ನೀಡಲು ಮೇಟಾ ಟೆಕ್ನಿಕಲ್ ವರ್ಕ್ ಕಂಪ್ಲೀಟ್ ಮಾಡುತ್ತಿದೆ. ಇದರ ಜೊತೆಯಲ್ಲಿ ವಾಟ್ಸಾಪ್ ಚಾನಲ್‌ಗಳ ಯೂಸರ್‌ಗಳಿಗೆ ಇನ್ನಷ್ಟು ಅಪ್‌ಡೇಟ್ ನೀಡಲು ವಾಟ್ಸಾಪ್ ಮುಂದಾಗಿದೆ.
SUMMARY | WhatsApp plans to introduce a bottom bar for sharing media to other apps, Users may directly post WhatsApp media as stories on Instagram and Facebook
KEY WORDS |Instagram , Facebook, WhatsApp plans , WhatsApp media