visvesvaraya Iron and Steel Plant 07-06-2025 :  ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆಗೆ  ಕೇಂದ್ರ ಅಧಿಕಾರಿಗಳ ನಿಯೋಗ ಬೇಟಿ

prathapa thirthahalli
Prathapa thirthahalli - content producer

visvesvaraya Iron and Steel Plant :  ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆಗೆ  ಕೇಂದ್ರ ಅಧಿಕಾರಿಗಳ ನಿಯೋಗ ಬೇಟಿ

ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿಯೋಗ ಶುಕ್ರವಾರ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆಗೆ ಬೇಟಿ ನೀಡಿ ವರದಿ ಪಡೆದು ಕೊಡಿದ್ದಾರೆ.

visvesvaraya Iron and Steel Plant :   ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೇಂದು ಪ್ರಕಾಶ್‌, ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್‌ ಪಾಂಡ್ರಿಕ್‌, ಜಂಟಿ ಕಾರ್ಯದರ್ಶಿ ಅಭಿಜಿತ್‌ ನರೇಂದ್ರರವರು ವಿಮಾನದ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು . ನಂತರ ಭದ್ರಾವತಿ  ವಿಐಎಸ್‌ಎಲ್‌ ಕಾರ್ಖಾನೆಗೆ ಭೇಟಿ ನೀಡಿ ಸರ್‌. ಎಂ.ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು, ನಂತರ ಕಾರ್ಖಾನೆಯ ಪ್ರೈಮರಿ ಮಿಲ್‌, ಎಸ್‌ಎಂಎಸ್‌ ಮಿಲ್‌, ಫೋರ್ಜ್‌ ಪ್ಲಾಂಟ್‌, ಬ್ಲಾಸ್ಟ್‌ ಫರ್ನೇಸ್‌ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ತಂಡ ಪರಿಶೀಲನೆ ನಡೆಸಿತು. ನಂತರ ಸಂಬಂಧ ಪಟ್ಟ ವರದಿಯನ್ನು ಪಡೆಯಿತು.

- Advertisement -

ಈ ಹಿಂದೆ ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌.ಡಿ.ಕುಮಾರಸ್ವಾಮಿ  ಕಾರ್ಖಾನೆ ಪುನಶ್ಚೇತನಕ್ಕೆ 10 ಸಾವಿರ ಕೋಟಿ ಹಣ ಹೂಡಿಕೆ ಮಾಡುವುದಾಗಿ ತಿಳಿಸಿದ್ದರು. ಅದರ ಬೆನ್ನಲ್ಲೇ ಅಧಿಕಾರಿಗಳ ಈ ಭೇಟಿ, ಕಾರ್ಖಾನೆಯ ಭವಿಷ್ಯದ ಕುರಿತು ಆಶಾಭಾವನೆ ಮೂಡಿಸಿದೆ. ಈ ವರದಿಯು VISL ಪುನಶ್ಚೇತನ ಪ್ರಕ್ರಿಯೆಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.

Share This Article