viral news 07-06-25 : ಗುಟ್ಕಾ ತಂದ ಎಡವಟ್ಟು, ವ್ಯಕ್ತಿ ಸ್ಥಳದಲ್ಲೇ ಸಾವು | ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

viral news : ಗುಟ್ಕಾ ತಂದ ಎಡವಟ್ಟು, ವ್ಯಕ್ತಿ ಸ್ಥಳದಲ್ಲೇ ಸಾವು | ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ವ್ಯಕ್ತಿಯೋರ್ವ ಗುಟ್ಕಾ ಉಗುಳಲು ಕಾರ್​​ನ ಬಾಗಿಲು ತೆರದ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಲಾಸ್​ಪುರ್​ನಲ್ಲಿ ನಡೆದಿದೆ. ಆ ಭಯಾನಕ ಅಪಘಾತದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

viral news  ವರದಿಗಳ ಪ್ರಕಾರ ಬಿಲಾಸ್​ಪುರ ಹೊರವಲಯದಲ್ಲಿ  ಮೂವರು ವ್ಯಕ್ತಿಗಳು ಇನ್ನೋವ ಕಾರಿನಲ್ಲಿ ಸರಿ ಸುಮಾರು 100 ಕಿಲೋಮೀಟರ್​ ಸ್ಪೀಡ್​ನಲ್ಲಿ ಬರುತ್ತಿದ್ದರು. ಆ ವೇಳೆ ಕಾರಿನಲ್ಲಿದ್ದ ರಾಕಿ ಎಂಬ ವ್ಯಕ್ತಿ ಗುಟ್ಕಾ ಉಗುಳಲು ಕಾರಿನ ಬಾಗಿಲು ತೆರೆದಿದ್ದಾನೆ. ಆಗ ಕಾರು ಸ್ಪೀಡ್​ ಇದ್ದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದರಿಂದಾಗಿ ರಾಕಿ ಸೇರಿದಂತೆ ಇನ್ನಿಬ್ಬರು ಯುವಕರು ಹೊರ ಎಸೆಯಲ್ಪಟ್ಟಿದ್ದಾರೆ. ಇದರ ಪರಿಣಾಮ ರಾಕಿ ಎಂಬಾತನಿಗೆ ತೀವ್ರಗಾಯಗಳಾಗಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Leave a Comment