Vinobanagar Police ಶಿವಮೊಗ್ಗ, ನವೆಂಬರ್ 11, 2025, ಮಲೆನಾಡುಟುಡೆ ನ್ಯೂಸ್: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮಾಂಗಲ್ಯ ಸರವೊಂದನ್ನು ವ್ಯಕ್ತಿಯೊಬ್ಬರು ಪ್ರಾಮಾಣಿಕವಾಗಿ ವಾರಸುದಾರರ ಕೈಗೆ ತಲುಪಿಸಿದ್ದಾರೆ.
ಘಟನೆಯು ನವೆಂಬರ್ 7, 2024 ರಂದು ವಿನೋಬನಗರದ 100 ಅಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಬಳಿ ನಡೆದಿತ್ತು. ಬೆಂಕಿನಗರದ ನಿವಾಸಿಯಾದ ಶ್ವೇತಾ ಎಂಬುವವರು ಆಕಸ್ಮಿಕವಾಗಿ ತಮ್ಮ ಮಾಂಗಲ್ಯ ಸರವನ್ನು ಆ ಪ್ರದೇಶದಲ್ಲಿ ಕಳೆದುಕೊಂಡಿದ್ದರು. ಈ ಕಳೆದುಹೋಗಿದ್ದ ಮಾಂಗಲ್ಯ ಸರವು ತೀರ್ಥಪ್ಪ ದೇವಕಾತಿಕೊಪ್ಪ ನಿವಾಸಿಗಳಾದ ತೀರ್ಥಪ್ಪ ಅವರಿಗೆ ದೊರೆತಿದೆ. ಸರವನ್ನು ಕಂಡ ತಕ್ಷಣವೇ ಅದನ್ನು ತಮ್ಮ ಬಳಿ ಇರಿಸಿಕೊಳ್ಳದೆ, ಪ್ರಾಮಾಣಿಕತೆಯನ್ನು ಮೆರೆದ ತೀರ್ಥಪ್ಪನವರು ಕೂಡಲೇ ವಿನೋಬನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಕಟ್ಟೆಚ್ಚರ: ರೈಲ್ವೆ ನಿಲ್ದಾಣ, ಮಾರುಕಟ್ಟೆಗಳಲ್ಲಿ ಶ್ವಾನದಳದಿಂದ ಬಿಗಿ ತಪಾಸಣೆ : ಕಾರಣವೇನು
ಅಂತಿಮವಾಗಿ, ವಿನೋಬನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ (ಪಿಐ) ಸಂತೋಷ್ ಕುಮಾರ್ ಡಿ.ಕೆ. ಅವರ ನೇತೃತ್ವದಲ್ಲಿ, ದೊರೆತ ಮಾಂಗಲ್ಯ ಸರವನ್ನು ವಾರಸುದಾರರಾದ ಶ್ವೇತಾ ಅವರಿಗೆ ಹಿಂತಿರುಗಿಸಲಾಯಿತು.
Vinobanagar Police


