ಗೃಹಜ್ಯೋತಿ ಯೋಜನೆಯಲ್ಲಿ ಸದ್ಯದಲ್ಲಿಯೇ ಉಪಯುಕ್ತ ಬದಲಾವಣೆ! ಡಿ-ಲಿಂಕ್ ವ್ಯವಸ್ಥೆಗೆ ಇಂಧನ ಇಲಾಖೆ ಆದೇಶ
Useful change in Grihajyoti Yojana soon! Energy Department orders for D-Link system
Shivamogga | Feb 8, 2024 | ರಾಜ್ಯಸರ್ಕಾರದ ಗೃಹಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆಯೊಂದನ್ನ ಮಾಡಲಾಗುತ್ತಿದೆ.. ಗೃಹಜ್ಯೋತಿ ಯೋಜನೆಯಲ್ಲಿ ಫಲಾನುಭವಿಗಳು ಮನೆ ಬದಲಾಯಿಸಿದಾಗ ಅವರಿಗೆ ಹೊಸಮನೆಯ ಎಲೆಕ್ಟ್ರಿಕ್ ಬಿಲ್ನ್ನ ಜೋಡಿಸಲು ಯೋಜನೆಯ ಅಡಿಯಲ್ಲಿ ಡಿಲಿಂಕ್ ( D-Link system)ಅವಕಾಶವನ್ನ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ.
ಬಾಡಿಗೆ ಮನೆ ಅಥವಾ ಮನೆ ಬದಲಾಯಿಸುವ ಗೃಹಜ್ಯೋತಿ ಯ ಫಲಾನುಭವಿಗಳು ಮನೆ ಬದಲಾ ಯಿಸಿದ ಬಳಿಕವೂ ಯೋಜನೆಯ ಪ್ರಯೋಜನವನ್ನು ಪಡೆಯಲು ಇಂಧನ ಇಲಾಖೆ ಅವಕಾಶ ಕಲ್ಪಿಸಿದೆ. ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡಿದ್ದ ಗೃಹಜ್ಯೋತಿ ಫಲಾನುಭವಿಗಳಿಗೆ ಮಾಡುವ ಅವಕಾಶ ಇರಲಿಲ್ಲ, ಇದೀಗ ಸರ್ಕಾರ ಡಿಲಿಂಕ್‌ಗೆ
ಕೂಡ ಅವಕಾಶ ಕಲ್ಪಿಸಿದೆ.
ಗ್ರಾಹಕರು ತಮ್ಮ ಮನೆಯನ್ನು ಬದಲಾಯಿಸಿದಂತಹ ಸಂದರ್ಭದಲ್ಲಿ ಅಥವಾ ಇತರ ಸಂದರ್ಭದಲ್ಲಿ ಈಗಾಗಲೇ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗುತ್ತದೆ. ಆದ್ದರಿಂದ ಎಲ್ಲ ವಿದ್ಯುತ್ ನಿಗಮಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಇಂಧನ ಇಲಾಖೆ ಹೇಳಿದೆ.
ಪ್ರಕಟಣೆ ಇಲ್ಲಿದೆ