ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಬಗ್ಗೆ , ಗ್ರಾಹಕರು ಪದೇಪದೆ ಕೇಳಿಬರುತ್ತಿರುವ ಪ್ರಶ್ನೆಗಳು ಏನು ಗೊತ್ತಾ? ಅವುಗಳಿಗೆ ಇಲ್ಲಿದೆ ಉತ್ತರ

Do you know what are the questions that consumers are repeatedly asking about the state government's GrihaJyoti scheme? Here's the answer to them / how to apply for free electricity online,/ seva sindhu portal for free electricity

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಬಗ್ಗೆ , ಗ್ರಾಹಕರು ಪದೇಪದೆ ಕೇಳಿಬರುತ್ತಿರುವ ಪ್ರಶ್ನೆಗಳು ಏನು ಗೊತ್ತಾ? ಅವುಗಳಿಗೆ ಇಲ್ಲಿದೆ ಉತ್ತರ

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS  

 free electricity kamataka / ರಾಜ್ಯ ಸರ್ಕಾರ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ  (gruha jyothi ) ಯೋಜನೆಯನ್ನ ಆರಂಭಿಸಿದೆ. ಆದರೆ ಈ ಸಂಬಂಧ ಗ್ರಾಹಕರಲ್ಲಿ ಹಲವು ಪ್ರಶ್ನೆಗಳು ಸಹ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದೆ. ಆ ಪ್ರಶ್ನೆಗಳು ಯಾವುವು? ಅವುಗಳಿಗೆ ಉತ್ತರವೇನು ಎನ್ನುವುದನ್ನು ನೋಡುವುದಾದರೆ, ಅದರ ವಿವರ  ಈ ರೀತಿಯಿದೆ. 

ಗೃಹ ಜ್ಯೋತಿ - ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

1. ನಾನು ಈ ಯೋಜನೆಗೆ ಅರ್ಹನೇ?

ಕರ್ನಾಟಕ ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

2. ಗೃಹ ಜ್ಯೋತಿ ಯೋಜನೆ ಎಂದರೇನು?

“ಗೃಹ ಜ್ಯೋತಿ" ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ.

3. ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು? ಈ ಯೋಜನೆಯನ್ನು ಸೇವಾ ಸಿಂಧು ವೆಬ್‌ಸೈಟ್ ನಲ್ಲಿ (https://sevasindhugs.karnataka.gov.in) (ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್) ನೋಂದಾಯಿಸಿಕೊಳ್ಳಬೇಕು. ನೋಂದಣಿಯು ಜೂನ್-18, 2023 ರಿಂದ ಪ್ರಾರಂಭವಾಗಿದೆ.

4. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?

ಜುಲೈ 2023 ರಲ್ಲಿ ಬಳಸಿದ ವಿದ್ಯುತ್‌ ಬಳಕೆಯನ್ನು ಆಗಸ್ಟ್ 1, 2023 ರಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.

5. ಈ ಯೋಜನೆಯನ್ನು ನಾನು ಎಲ್ಲಿ ಸಲ್ಲಿಸಬಹುದು?

ಈ ಯೋಜನೆಯನ್ನು ಸೇವಾ ಸಿಂಧು ವೆಬ್‌ಸೈಟ್ ನಲ್ಲಿ (https://sevasindhugs.karnataka.gov.in) (ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್) ನೋಂದಾಯಿಸಿಕೊಳ್ಳಬೇಕು. ನೋಂದಣಿಯು ಜೂನ್-18, 2023 ರಿಂದ ಪ್ರಾರಂಭ.

6. ಈ ಯೋಜನೆಯನ್ನು ಆಫ್​ಲೈನ್​ನಲ್ಲಿ (Offline) ಮೂಲಕ ನಾನು ಪಡೆಯಬಹುದೇ?

ಹೌದು. ಎಲ್ಲಾ ಗೃಹಬಳಕೆ ಗ್ರಾಹಕರು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್ ಮತ್ತು ನಾಡಕಛೇರಿ ಹಾಗೂ ವಿದ್ಯುತ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

7. ಈ ಯೋಜನೆ ಪಡೆಯಲು ಯಾವುದೆಲ್ಲಾ ಮಾಹಿತಿ ಸಲ್ಲಿಸಬೇಕು? ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಸಲ್ಲಿಸಬೇಕು.

8. ಅರ್ಜಿ ಸಲ್ಲಿಸುವಾಗ ನಾನು ಶುಲ್ಕ ಪಾವತಿಸಬೇಕೆ?

ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಪಾವತಿಸಬೇಕಾಗಿರುವುದಿಲ್ಲ.

9. ನಾನು ಜೂನ್ ತಿಂಗಳ ವಿದ್ಯುತ್ ಬಿಲ್ಲನ್ನು ಪಾವತಿಸಬೇಕೆ? 

ಹೌದು. ಆಗಸ್ಟ್ 1, 2023 ರಿಂದ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ (ಜುಲೈ 2023 ರಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು) ಯೋಜನೆಯನ್ನು ಜಾರಿಗೊಳಿಸಲಾಗುವುದು.

10. ನನಗೆ ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ, ನಾನು ಎಲ್ಲಾ ಮಾಪಕಗಳಿಗೆ ಅರ್ಹನಿರುವೇನೆ? 

ಇಲ್ಲ. ಈ ಯೋಜನೆಯಡಿ ಪ್ರತಿ ಮನೆಯ ಒಂದು ಮೀಟರ್ ಗೆ ಮಾತ್ರ ಅರ್ಹರಾಗಿರುತ್ತಾರೆ.

11. ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯಬಹುದೇ? 

ಹೌದು, ನೋಂದಣಿ ಸಮಯದಲ್ಲಿ ಸ್ವೀಕೃತಿ ಪತ್ರವನ್ನು ಗ್ರಾಹಕರಿಗೆ ನೀಡಲಾಗುತ್ತದೆ.

ಇದನ್ನು ಸಹ ಓದಿ!: ಪೇಟೆಯಲ್ಲಿಯೇ ವೇಶ್ಯಾವಾಟಿಕೆ! ಮೂವರು ಮಹಿಳೆಯರ ರಕ್ಷಣೆ ! ಇಬ್ಬರ ಅರೆಸ್ಟ್ ! ಪೊಲೀಸ್ ಕಾರ್ಯಾಚರಣೆಯ ಇನ್ನಷ್ಟು ಡಿಟೇಲ್ಸ್ ಇಲ್ಲಿದೆ ಓದಿ


 

Tags :  how to apply for free electricity online, seva sindhu portal for free electricity, bescom free electricity registration, how to register for free electricity in bangalore, seva sindhu portal for free electricity apply online, seva sindhu portal for free electricity login, seva sindhu free electricity registration, seva sindhu free electricity registration online,  free electricity kamataka, free electricity in karnataka, free electricity for agriculture in karnataka, free electricity for farmers in karnataka, free electricity for sc st in karnataka free electricity application form, electricity charges in karnataka, how to get a free electricity, free electricity state in india, where does karnataka get electricity, is there a way to get free electricity, is electricity really free in delhi, is electricity free in india, is electricity free in delhi, how delhi govt is giving free electricity, conditions for free electricity in karnataka, is there free electricity, congress free electricity in karnataka,