Shivamogga Mar 4, 2024 Upendra’s UI troll song ಈ ಸಲ ಉಪ್ಪಿ ಮತ್ತೆ ಬಂದಿದ್ದಾರೆ ಯು ಐ ಸಿನಿಮಾ ಸಖತ್ ಸದ್ದು ಮಾಡ್ತಿದೆ. ರಿಯಲ್ ರಿಯಾಲಿಟಿಯನ್ನ ಹಾಗಾಗೇ ತೋರಿಸುವ ಉಪೇಂದ್ರ ಈ ಹಿಂದಿನ ನಿರ್ದೇಶನದಲ್ಲಿ ಸೋತಿದ್ದ ಉಪ್ಪಿ ಇದೀಗ ಲೇಟೆಸ್ಟ್ ರೀಲ್ಸ್ ಸಾಂಗ್ನೊಂದಿಗೆ ಬಂದಿದ್ದಾರೆ.
ಹೌದು ಸರ್, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದಾಗುತ್ತಿರುವ ಟ್ರೋಲ್ ಟೈಟಲ್ಗಳು ಹಾಗೂ ಪದಗಳು ಹಾಗೂ ಮತ್ತು ರೀಲ್ಸ್ ಸಾಂಗ್ಗಳ ನೇಮ್ಗಳಲ್ಲಿಯೇ ಉಪೇಂದ್ರ ಸಿನಿಮಾದ ಯುಐ ಹಾಡು ರಿಲೀಸ್ ಆಗಿದೆ. ರಿಲೀಸ್ ಆದ ಕೆಲ ಹೊತ್ತಿನಲ್ಲಿಯೇ ಸಾಂಗ್ ಟ್ರೋಲ್ ಅಷ್ಟೆ ಅಲ್ಲದೆ ವೈರಲ್ ಆಗಿದೆ.
ಸದ್ಯ ರಿಲೀಸ್ ಆಗಿರುವ ಸಾಂಗ್ನ್ನ ನರೇಶ್ ಕುಮಾರ್ ಎಂಬವರು ಬರೆದಿದ್ಧಾರೆ. ಇದರಲ್ಲಿ ಇತ್ತೀಚಿನ ಟ್ರೆಂಡಿಂಗ್ ಪದಗಳನ್ನ ಬಳಸಲಾಗಿದೆ. ಅದನ್ನ ಹೇಳೋದಕ್ಕಿಂತ ಕೇಳೋದಕ್ಕೆ ಸಖತ್ ಆಗಿ ಕೇಳ್ತಿದೆ. ಎಲ್ಲಿದ್ದಿಯಪ್ಪದಿಂದ ಹಿಡಿದು ಹೆಂಗ್ ಪುಂಗ್ಲಿ, ಕರಿಮಣಿ ಮಾಲೀಕ, ಅರ್ಜುನ ಸನ್ಯಾಸಿ, ಬೆಳ್ಳುಳ್ಳಿ ಕಬಾಬ್, ಆಲ್ ರೈಟ್, ರಾಂಗ್ ಆಗ್ತಾರೆ ರಂಗಣ್ಣ, ರಾಜಕೀಯವೇ ಖುಷಿಕೊಡೋ ಸುದ್ದಿ, ಡೋಲೋ 650 , ರಾಗಿಹಿಟ್ಟು ಹೀಗೆ ಒಂದರೆಡಲ್ಲ.. ಹಲವು ಪದಗಳು ಸಿನಿಮಾದಲ್ಲಿ ತೀರಾ ಇತ್ತೀಚಿನ ತಗಡು ಪದ ಬಳಕೆಯಾಗಿದೆ. ವಿಶೇಷ ಅಂದರೆ ಇತರೇ ಬಾಷೆಗಳಲ್ಲಿ ರಿಲೀಸ್ ಆಗಿರುವ ಸಾಂಗ್ನಲ್ಲಿ ಅಲ್ಲಿನ ನೆಟಿವಿಟಿ ಟ್ರೋಲ್ ಸಾಂಗ್ ಪದಗಳನ್ನ ಬಳಸಲಾಗಿದೆ.
ಇನ್ನೂ ವಿಶೇಷ ಅಂದರೆ ಸಾಂಗ್ನ ಟೈಟಲ್ಲೇ ಟ್ರೋಲ್ ಆಗುತ್ತೆ, ಟ್ರೋಲ್ ಆಗುತ್ತೆ ಎಂಬುದರಿಂದ ಶುರುವಾಗುತ್ತದೆ. ಒಟ್ಟಾರೆ ಸಾಂಗ್ ಸಖತ್ ಹೈಪ್ ಕ್ರಿಯೆಟ್ ಮಾಡುತ್ತಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದು,. ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ ಹಾಗೂ ಅಜನೀಶ್ ಹಾಡಿದ್ದಾರೆ.